ಪೌರ ಕಾರ್ಮಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ನಿರ್ದೇಶಕ ಇಂದ್ರಜಿತ್ ಲಂಕೇಶ್!

ಪತ್ರಕರ್ತ, ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕೋರಮಂಗಲದ ಶ್ರೀ ಕೊದಂಡರಾಮ ಸೇವಾ ಸದನದಲ್ಲಿ ಪೂಜೆ ಸಲ್ಲಿಸಿದ ಇಂದ್ರಜಿತ್ ಲಂಕೇಶ್ ಅವರು, ನಂತರ ಪೌರ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ.

ಪ್ರತಿ ವರ್ಷವೂ ತಮ್ಮ ಹುಟ್ಟುಹಬ್ಬವನ್ನು ಇಂದ್ರಜಿತ್ ಅವರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ. ವಿಶೇಷ ಚೇತನರಿಗೆ ನೆರವು ನೀಡುವುದು, ಕೋಮು ಗಲಭೆಯಲ್ಲಿ ತೀರಿಕೊಂಡ ಹುಡುಗರ ಮನೆಗೆ ಹೋಗಿ ಸಾಂತ್ವನ ಹೇಳಿ ಅವರಿಗೆ ಕೈಲಾದ ಸಹಾಯ‌ ಮಾಡುವುದು ಹೀಗೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೇ ಇಂದ್ರಜಿತ್ ಅವರು ಈ ಹಿಂದೆ, ಕಾರ್ಗಿಲ್ ಯುದ್ದದಲ್ಲಿ ಮಡಿದ ಹನುಮಂತ ನಾಯಕ್ ಅವರಿಗೆ ಗೌರವ ಸೂಚಕವಾಗಿ ಟೌನ್ ಹಾಲ್​ನಲ್ಲಿ ದೊಡ್ಡ ಸಮಾರಂಭ ಆಯೋಜಿಸಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹನುಮಂತ ನಾಯಕ್ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದರು. ಕಷ್ಟದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಿಗೆ ಆರ್ಥಿಕ ಸಹಕಾರ ನೀಡಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಕೊಳ್ಳುತ್ತಾ ಬಂದಿರುವ ಇಂದ್ರಜಿತ್ ಲಂಕೇಶ್ ನಿಜಕ್ಕೂ ಹಲವರಿಗೆ ಆದರ್ಶವಾಗಿದ್ದಾರೆ.

ಇದನ್ನೂ ಓದಿ : ಮಹೇಶ್‌ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಿಂದ 1 ವರ್ಷ ಗಡಿಪಾರು.. ಎಲ್ಲಿಗೆ ಗೊತ್ತಾ?

Btv Kannada
Author: Btv Kannada

Read More