ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ದಂಪತಿಗಳು ಮದುವೆಯಾದ ನಾಲ್ಕು ವರ್ಷಗಳ ನಂತರ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಈ ಜೋಡಿ ಘೋಷಿಸಿದೆ.
ಹೌದು.. 2021ರಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸಸ್ ರೆಸಾರ್ಟ್, ಫೋರ್ಟ್ ಬರ್ವಾರದಲ್ಲಿ ಈ ಜೋಡಿ ಮದುವೆಯಾಗಿದ್ದರು. ವಿವಾಹವಾದ ನಾಲ್ಕು ವರ್ಷಗಳ ನಂತರ ಇದೀಗ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಕೆಲವು ದಿನಗಳಿಂದ ಕತ್ರಿನಾ ಕೈಫ್ ತಾಯಿಯಾಗುತ್ತಿರುವ ಬಗ್ಗೆ ವದಂತಿ ಹಬ್ಬಿತ್ತು. ಅಷ್ಟೇ ಅಲ್ಲದೇ ಮುಂದಿನ ತಿಂಗಳೇ ಮಗು ಆಗಮನದ ಕುರಿತಾಗಿಯೂ ಸುದ್ದಿಯಾಗಿತ್ತು. ವದಂತಿಗೆ ತೆರೆ ಬಿದ್ದಿದೆ. ತಮ್ಮ ಪ್ರೆಗ್ನೆನ್ಸಿಯನ್ನು ಖುದ್ದು ಖಚಿತಪಡಿಸಿರುವ ಕತ್ರಿನಾ, ಬೇಬಿ ಬಂಪ್ ಫೋಟೋಶೂಟ್‌ನ ಫೋಟೋವನ್ನ ಕೈಯಲ್ಲಿ ಹಿಡಿದು ಇಸ್ಟಾದಲ್ಲಿ ದಂಪತಿ ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತೆ “ನಮ್ಮ ಜೀವನದ ಹೊಸ ಅಧ್ಯಾಯವನ್ನು ತುಂಬಿದ ಹೃದಯಗಳೊಂದಿಗೆ ಆರಂಭಿಸುವ ಹಾದಿಯಲ್ಲಿ ನಾವಿದ್ದೇವೆ” ಎಂದು ಹೇಳುವ ಮೂಲಕ ಖುಷಿ ಕ್ಷಣವನ್ನ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಕ್ರಿಮಿನಲ್ ವ್ಯಾಪ್ತಿಯಿಂದ ಮಾನನಷ್ಟ ಮೊಕದ್ದಮೆಗಳು ಹೊರ ತರಲು ಇದು ಸಕಾಲ – ಸುಪ್ರೀಂ ಕೋರ್ಟ್ ಅಭಿಪ್ರಾಯ!







