ಅಕ್ರಮ ಸಂಬಂಧ ಶಂಕೆ – ಪತ್ನಿಗೆ 11 ಬಾರಿ ಚಾಕು ಇರಿದು ಕೊಂದ ಆರೋಪಿ ಅರೆಸ್ಟ್!

ಬೆಂಗಳೂರು : ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಗಂಡ, ಮಗಳ ಎದುರಲ್ಲೇ ಪತ್ನಿಗೆ 11 ಬಾರಿ ಚಾಕು ಇರಿದು ಕೊಂದಿರುವ ಘಟನೆ ನಿನ್ನೆ ಬೆಂಗಳೂರಿನ ಸಂಕದಕಟ್ಟೆ ಬಳಿ ನಡೆದಿತ್ತು. ಇದೀಗ ಆರೋಪಿ ಲೋಕೇಶ್​ನನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ರೇಖಾ ಎಂಬ ಮಹಿಳೆಗೆ ನಿನ್ನೆ ಬೆಳಗ್ಗೆ 11.35ರ ಸುಮಾರಿಗೆ ಲೋಕೇಶ್‌ ಅಲಿಯಾಸ್‌ ಲೋಹಿತಾಶ್ವ ಎನ್ನುವ ವ್ಯಕ್ತಿ ಚಾಕು ಇರಿದಿದ್ದಾನೆ. ಸುಂಕದಕಟ್ಟೆ ಬಸ್‌ ಸ್ಟ್ಯಾಂಡ್‌ನಲ್ಲಿ ಘಟನೆ ನಡೆದಿದ್ದು, ಬಳಿಕ ರೇಖಾಳನ್ನು ಪೊಲೀಸರು ಹಾಗೂ ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಾಕು ಇರಿದ ನಂತರ ಲೊಕೇಶ್‌ ಪರಾರಿಯಾಗಿದ್ದ, ಸ್ಥಳಕ್ಕೆ ಕಾಮಾಕ್ಷಿ ಪಾಳ್ಯ ಪೊಲೀಸರು ಬೇಟಿ ನೀಡಿ ಪರಿಶೀಲನೆ ಮಾಡಿದ್ದರು.

ಈ ಕೊಲೆಯ ಪ್ರಾಥಮಿಕ ತನಿಖೆಯಲ್ಲಿ ರೇಖಾಗೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಅನೈತಿಕ ಸಂಬಂಧವಿತ್ತು ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಆರೋಪಿ ಲೋಕೇಶ್ ಅನ್ನು ದೂರ ಮಾಡ್ತಿದ್ಲು ಎಂದು ಕೊಲೆಗೈದಿದ್ದಾನೆ.

ಇದನ್ನೂ ಓದಿ : ಸಿನಿ ಪ್ರಿಯರಿಗೆ ಬಿಗ್ ಶಾಕ್ – ಫಿಲ್ಮ್ ಟಿಕೆಟ್ ದರ 200 ರೂ. ನಿಗದಿ ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್​ ತಡೆ!

Btv Kannada
Author: Btv Kannada

Read More