ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮವು ಸೋಮವಾರ ವಿಜೃಂಭಣೆಯಿಂದ ಆರಂಭಗೊಂಡಿದ್ದು, ಈ ಸಂಭ್ರಮದ ಮಧ್ಯೆಯೇ ಚಾಮುಂಡಿ ಬೆಟ್ಟದ ಅರ್ಚಕರು ಇಹಲೋಹ ತ್ಯಜಿಸಿದ್ದಾರೆ.
ತಡರಾತ್ರಿ ಚಾಮುಂಡಿ ಬೆಟ್ಟದ ಶಿವಾರ್ಚಕ ವಿ ರಾಜು ನಿಧನ ಹಿನ್ನಲೆ ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ದೇವಿ ದರ್ಶನ ಬಂದ್ ಮಾಡಲಾಗಿದೆ. ಮಧ್ಯಾಹ್ನ ಸಂಸ್ಕಾರ ಮುಗಿದ ಬಳಿಕ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ನವರಾತ್ರಿ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರ್ತಿದ್ದು, ಇಂದು ದಿಢೀರ್ ದೇವಿ ದರ್ಶನಕ್ಕೆ ನಿರ್ಬಂಧ ಹಿನ್ನೆಲೆ ಸಾರ್ವಜನಿಕರಿಗೂ ತೊಂದರೆಯಾಗಲಿದೆ.
ಎರಡನೇ ದಿನ ಬ್ರಹ್ಮಚಾರಿಣಿ ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸುತ್ತಿದ್ದಾರೆ. ದೇವಿಗೆ ಮಧ್ಯಾಹ್ನದ ಬಳಿಕ ವಿಶೇಷ ಪೂಜೆ ಕೈಂಕಾರ್ಯ ನಡೆಯಲಿದೆ. ಅರಮನೆಯಲ್ಲಿ ಎರಡನೇ ದಿನದ ಖಾಸಗಿ ದರ್ಬಾರ್ ನಡೆಯುತ್ತಿದ್ದು, ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಹಸುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ : ಯೂಟ್ಯೂಬರ್ ಖ್ವಾಜಾ ವಿರುದ್ಧ ಅಪಹರಣ, ಜೀವ ಬೆದರಿಕೆ ಆರೋಪ – ಕೇಸ್ ದಾಖಲು!
Author: Btv Kannada
Post Views: 776







