ಹುಬ್ಬಳ್ಳಿ : ಯೂಟ್ಯೂಬರ್ ಖ್ವಾಜಾ @ ಮುಕುಳೆಪ್ಪ ವಿರುದ್ಧ ಅಪಹರಣ, ಜೀವ ಬೆದರಿಕೆ ಆರೋಪದಡಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮುಕುಳೆಪ್ಪ ಪತ್ನಿ ಗಾಯತ್ರಿ ವಿಚಾರಣೆಗೆ ಹಾಜರಾಗಿದ್ದಳು. ವಕೀಲರ ಮೂಲಕ ಠಾಣೆಗೆ ಬಂದ ಯೂಟ್ಯೂಬರ್ ಮುಕುಳೆಪ್ಪ ಪತ್ನಿ ಗಾಯತ್ರಿಯನ್ನು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಡಿಸಿಪಿ,ಎಸಿಪಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ನಾನು ಸ್ವಇಚ್ಛೆಯಿಂದ ಮದುವೆ ಆಗಿದ್ದೇನೆ, ನಾವಿಬ್ಬರು ಎರಡೂವರೆ ವರ್ಷ ಪ್ರೀತಿಸಿ ಬಳಿಕ ಮದುವೆ ಆಗಿದ್ದೇವೆ, ನನಗೆ ಜೀವ ಬೆದರಿಕೆ ಇದೆ, ರಕ್ಷಣೆ ಬೇಕು ಎಂದು ಗಾಯತ್ರಿ ಹೇಳಿದ್ದಾರೆ.
ಹಿಂದೂಪರ ಸಂಘಟನೆಗಳು ವಿದ್ಯಾನಗರ ಪೊಲೀಸ್ ಎದುರು ಹೈಡ್ರಾಮಾ ಮಾಡಿದ್ದು, ಈ ಪ್ರಕರಣ ಸಂಬಂಧ ಹುಬ್ಬಳ್ಳಿಯಲ್ಲಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮಾಜಿ ಸಚಿವ, BJP ಶಾಸಕ ಸುರೇಶ್ ಕುಮಾರ್ಗೆ ಮಾತೃವಿಯೋಗ!
Author: Btv Kannada
Post Views: 740







