ಮಾಜಿ ಸಚಿವ, BJP ಶಾಸಕ ಸುರೇಶ್ ಕುಮಾರ್​​​ಗೆ ಮಾತೃವಿಯೋಗ!

ಬೆಂಗಳೂರು : ಮಾಜಿ ಸಚಿವ, ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ತಾಯಿ ಸುಶೀಲಮ್ಮ ಅವರು ವಯೋಸಹಜ ಕಾಯಿಲೆಯಿಂದ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.

ಈ ಕುರಿತು ಸ್ವತಃ  ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಸುರೇಶ್ ಕುಮಾರ್, ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್ ಇನ್ನಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು ಎಂದು ಬರೆದಿದ್ದಾರೆ.

ಶಿಕ್ಷಕಿಯಾಗಿದ್ದ ಸುಶೀಲಮ್ಮ ಅವರು ನಿವೃತ್ತಿ ಬಳಿಕ ಬೆಂಗಳೂರಿನ ಲಕ್ಷ್ಮಿ ನಾರಾಯಣ ಕೋ ಆಪರೇಟಿವ್ ಬ್ಯಾಂಕ್​ನ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಟ್ಟು 8 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ : ಯಲಹಂಕದಲ್ಲಿ 500 ಕೋಟಿ ಬೆಲೆಬಾಳುವ 33 ಎಕರೆ ಸರ್ಕಾರಿ ಭೂಮಿ ಲೂಟಿ – 20 ಮಂದಿ ವಿರುದ್ಧ FIR ಸಾಧ್ಯತೆ.. ಭೂಮಿ ಮಾಲೀಕರಿಗೆ ಯಾವುದೇ ಕ್ಷಣ ಜೈಲು!

Btv Kannada
Author: Btv Kannada

Read More