ಬೆಂಗಳೂರು : ಯಲಹಂಕದ ಸಿಂಗಹಳ್ಳಿ ಗ್ರಾಮದ 500 ಕೋಟಿ ಬೆಲೆ ಬಾಳುವ 33 ಎಕರೆ ಸರ್ಕಾರಿ ಭೂಮಿಯನ್ನು 20 ಮಂದಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಲೂಟಿ ಮಾಡಿದ್ದಾರೆ. ಇದೀಗ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಲಪಟಾಯಿಸಿರುವ 20 ಜನರ ವಿರುದ್ಧ FIR ದಾಖಲಾಗುವ ಸಾಧ್ಯತೆಯಿದೆ. ಇನ್ನು ಯಾವುದೇ ಕ್ಷಣದಲ್ಲಿ ಭೂಮಿ ಮಾಲೀಕರು ಜೈಲು ಪಾಲಾಗಲಿದ್ದಾರೆ.

ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲೂಕಿನ ಸಿಂಗಹಳ್ಳಿ ಗ್ರಾಮದಲ್ಲಿ ಬಹಳ ಹಿಂದಿನ ಕಾಲದಿಂದಲೂ ಇರುವ ಸರ್ಕಾರಿ ಕೆರೆಯ ನೀರು ಮುಳುಗಡೆ ಜಮೀನನ್ನು ಲೂಟಿ ಮಾಡಿದ್ದಾರೆ. ಸರ್ಕಾರಿ ಬೀಳು ಸರ್ವೆ ನಂಬರ್ 9ರ 12.37ಎ.ಗುಂ, 10ರ 12.35ಎ.ಗುಂ ಮತ್ತು ಗರ 09.02 ಎ.ಗುಂ ಭೂಮಿ ಒಟ್ಟು ವಿಸ್ತೀರ್ಣ 33.34ಎ.ಗುಂ ಜಮೀನುಗಳನ್ನು ರಿಯಲ್ ಎಸ್ಟೇಟ್ ಭೂ ಮಾಫಿಯ ದಂದೆಕೋರರು ಹಾಗೂ ಸರ್ಕಾರಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ವಂಚನೆ ಮಾಡಿ ಸದರಿ ಜಮೀನುಗಳನ್ನು ಕಾನೂನು ಉಲ್ಲಂಘಿಸಿ ಅಕ್ರಮ ವಹಿವಾಟು ನಡೆಸಿ ಲಪಟಾಯಿಸಿದ್ದಾರೆ.
ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸಿಂಗಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ. ವಂಚನೆ ಮಾಡಿ ಜಮೀನು ಲೂಟಿ ಮಾಡಿದ ಸರ್ಕಾರಿ ಅಧಿಕಾರಿಗಳ ಮತ್ತು ಈ ಭೂ ಹಗರಣದ ಹಿಂದೆ ಇರುವ ಭೂಗಳ್ಳ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ತನಿಖೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಿ, ಈ ಸರ್ವೆ ನಂಬರ್‌ಗಳ ದಾಖಲೆಗಳಲ್ಲಿ ಸರ್ಕಾರಿ ಕೆರೆ ಎಂದು ನಮೂದು ಮಾಡಿ ನಮ್ಮೂರಿನ ಕೆರೆಯನ್ನು ಉಳಿಸಿಕೊಡಬೇಕೆಂದು ಸಿಂಗಹಳ್ಳಿ ಗ್ರಾಮಸ್ಥರು ಕೋರಿದ್ದಾರೆ.

ಸರ್ವೆ ನಂಬರ್ 11.37 ಎ.ಗುಂ ಪೈಕಿ 08.37 ಎ.ಗುಂ ಜಮೀನು ಕೆರೆ ನೀರು ಮುಳುಗಡೆ ಪ್ರದೇಶವಾಗಿದ್ದು, 1968 ರಿಂದ 1978 ನೇ ಇಸವಿಯ ಕೈ ಬರಹದ ಪಹಣಿ ಕಾಲಂ 12 ರಲ್ಲಿ ಕೆರೆ ನೀರು ಮುಳುಗಡೆ ಎಂದು ನಮೂದಾಗಿರುತ್ತದೆ. ಪಹಣೆಯ ಕಾಲಂ ನಂಬರ್ 9 ರಲ್ಲಿ 2009 ನೇ ಇಸವಿಯಿಂದ ಇವತ್ತಿನವರೆಗೂ ಕೆ.ಐ.ಎ.ಡಿ.ಬಿ ಮತ್ತು ಸರ್ಕಾರ ಎಂದು ಖಾತೆ ಇದ್ದರೂ, ಅಪರಿಚಿತ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿದ್ದಾರೆ.
ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿ ಕಾನೂನು ಉಲ್ಲಂಘನೆ ಮಾಡಿ ಬ್ಯಾಟರಾಯನಪುರ ಉಪನೊಂದಣಾಧಿಕಾರಿ ಕೆ.ವಿ.ರವಿಕುಮಾರ್ ರವರು ನಂಬರ್ BYP-1-09709-2024-25 ರಂತೆ ದಿನಾಂಕ: 04/10/2024 ರಂದು 8.37 ಎ.ಗುಂ ಜಮೀನನ್ನು ಅಪರಿಚಿತ ನಕಲಿ ವ್ಯಕ್ತಿಗಳಾದ ಬಾನು W/o ಬುಡಾನ್ ಸಾಬ್, ತಜಮುಲ್ ಬಾಷ S/o ಯೂಸುಫ್ ಬುಡೇನ್, ಅಲೀಮ್ ಪಾಷ S/o ಬುಡೇನ್ ಸಾಬ್, ಸಲೀಮುಲ್ಲಾ S/o ಬುಡೇನ್ ಸಾಬ್, ಮತ್ತು ರೇಷ್ಠ S/o ಬುಡೇನ್ ಸಾಬ್ ರವರುಗಳಿಂದ ದೇವರಾಜ್ S/o ರಾಜಣ್ಣ ಮತ್ತು ಎನ್.ವಾಸುದೇವ ರೆಡ್ಡಿ S/o ಪಿ.ನಂಜಾ ರೆಡ್ಡಿ ರವರವರಿಗೆ 08.37 ಎ.ಗುಂ ಸರ್ಕಾರಿ ಕೆರೆ ನೀರು ನಿಲುಗಡೆ ಪ್ರದೇಶದ ಜಮೀನನ್ನು ನಕಲಿ ಕ್ರಯಪತ್ರ ನೊಂದಣಿ ಮಾಡಿದ್ದಾರೆ.

ಉಪವಿಭಾಗಾಧಿಕಾರಿಯಾದ ಪ್ರಮೋದ್ ಎಲ್ ಪಾಟೀಲ್ ಅವರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸಿಂಗಹಳ್ಳಿ ಗ್ರಾಮದ ಸರ್ವೆ ನಂಬರ್ 9, 10, 11, 12 ಮತ್ತು 31 ರಲ್ಲಿ ಪ್ರಸ್ಥುತ ವಾಸ್ತವದಲ್ಲಿ ಸಿಂಗಹಳ್ಳಿ ಕೆರೆ ಇದ್ದು, ಇದರ ಛಾಯಾಚಿತ್ರ, ದಿಶಾಂಕ್ ಆಪ್‌ನ ಭೂ ನಕ್ಷೆ ಮತ್ತು ಗ್ರಾಮ ನಕ್ಷೆಯನ್ನು ಲಗತ್ತಿಸಿದೆ. ಇದೀಗ ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸಿಂಗಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದು, ಇನ್ನು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಲಪಟಾಯಿಸಿರುವ 20 ಜನರ ವಿರುದ್ಧ FIR ದಾಖಲಾಗುವ ಸಾಧ್ಯತೆಯಿದೆ.


ಇದನ್ನೂ ಓದಿ : ಮೂರು- ನಾಲ್ಕು ಬಾರಿ ನಾನು ಹೋಗೇಬಿಡ್ತಿದ್ದೆ, ದೈವ ನನ್ನನ್ನ ಬದುಕಿಸಿದೆ – ರಿಷಬ್ ಶೆಟ್ಟಿ ಭಾವುಕ!







