ಬೆಂಗಳೂರು : ಹಾಡಹಗಲೇ ಮನೆಗೆ ನುಗ್ಗಿ ಒಂದೂವರೆ ಕೋಟಿ ಲೂಟಿ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು ಮನೆಗೆ ನುಗ್ಗಿ ರಾಬರಿ ಮಾಡಿದ್ದಾರೆ.

ನಾಲ್ವರು ಆರೋಪಿಗಳು ಸರ್ಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಬಂದಿದ್ದರು. ನಾವು ಡಿಪಾರ್ಟ್ಮೆಂಟ್ನವರು ಎಂದು ಹೇಳಿ ಗಿರಿರಾಜು ಎಂಬುವವರ ಮನೆಗೆ ನುಗ್ಗಿ ನಿಮ್ಮ ಮನೆಯಲ್ಲಿ ಹಣ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಗಿರಿರಾಜು ಜಮೀನು ಖರೀದಿಗಾಗಿ ಹಣ ತಂದು ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದರು. ಮನೆಗೆ ನುಗ್ಗಿದ ಆರೋಪಿಗಳು ಹಣ ಎಲ್ಲಿದೆ, ಮನೆ ಮಾಲಿಕ ಗಿರಿರಾಜು ಎಲ್ಲಿ ಎಂದು ಕೇಳಿದ್ದಾರೆ.
ಗಿರಿರಾಜು ಅವರು ಇಲ್ಲ ಎಂದಾಗ ಖತರ್ನಾಕ್ ಗ್ಯಾಂಗ್ ಅಡುಗೆ ಮನೆಯಲ್ಲಿದ್ದ ಹಣದ ಬ್ಯಾಗ್ನ್ನು ತೆಗೆದುಕೊಂಡು ಹೋಗಿದೆ. ಘಟನೆ ಬಳಿಕ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟು ಒಂದೂವರೆ ಕೋಟಿ ನಗದು, 50 ಗ್ರಾಂ ಚಿನ್ನದ ಆಭರಣವನ್ನು ಗ್ಯಾಂಗ್ ದೋಚಿದ್ದು, ಸದ್ಯ ಘಟನೆ ಬಳಿಕ ಯಲಹಂಕ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸೆನ್ಸಾರ್ ಪಾಸಾದ ‘ಚೌಕಿದಾರ್’.. ಪೃಥ್ವಿ ಅಂಬಾರ್-ಧನ್ಯಾ ಸಿನಿಮಾಗೆ U/A ಸರ್ಟಿಫಿಕೇಟ್!







