ಕುಡಿದ ಮತ್ತಲ್ಲಿ ಫಾಸ್ಟ್​​​ಫುಡ್​​ ಮಾಲೀಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಆವಾಜ್ ಹಾಕಿದ ಪುಂಡ – ದೂರು ದಾಖಲು!

ಬೆಂಗಳೂರು : ಕುಡಿದ ಅಮಲಲ್ಲಿ ಫಾಸ್ಟ್​​​ಫುಡ್ ಮಾಲೀಕನಿಗೆ ಪುಂಡನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಆವಾಜ್ ಹಾಕಿದ ಘಟನೆ ಬೆಂಗಳೂರಿನ ರಾಜಾಜಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

<iframe src="https://www.facebook.com/plugins/video.php?height=476&href=https%3A%2F%2Fwww.facebook.com%2Freel%2F1600202407616686%2F&show_text=false&width=267&t=0" width="267" height="476" style="border:none;overflow:hidden" scrolling="no" frameborder="0" allowfullscreen="true" allow="autoplay; clipboard-write; encrypted-media; picture-in-picture; web-share" allowFullScreen="true"></iframe>

ರಾಜಾಜಿನಗರ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮಮಂದಿರದ ಬಳಿ ಇರುವ ಅನ್ನಪೂರ್ಣೇಶ್ವರಿ ಫಾಸ್ಟ್​​​ಫುಡ್​​ಗೆ ಎಂಟ್ರಿ ಕೊಟ್ಟ ಪುಂಡ, ಕುಡಿದ ಮತ್ತಲ್ಲಿ ಮೊಬೈಲ್ ಹಿಡಿದು ಮಾಲೀಕರಿಗೆ ಅವಾಜ್​ ಹಾಕಿದ್ದಾನೆ. ಆತನ ಒಂದಿಬ್ಬರು ಸಹಚರರನ್ನ ಕೂಡ ಕರೆತಂದಿದ್ದ ಪುಂಡ, ಸುಖಾಸುಮ್ಮನೆ ಗಲಾಟೆ ತೆಗೆದು ಅವಾಚ್ಯ ಶಬ್ಧದಿಂದ ಫಾಸ್ಟ್​​​ಫುಡ್ ಮಾಲೀಕರಿಗೆ ನಿಂದಿಸಿದ್ದಾನೆ. 

ಅಷ್ಟೇ ಅಲ್ಲದೆ, ಹೋಟೆಲ್ ಸಿಬ್ಬಂದಿಯ ಜೊತೆ ಹೊಡೆದಾಟಕ್ಕೂ ಪುಂಡ ಮುಂದಾಗಿದ್ದ. ಸದ್ಯ ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಗೆ ಹೋಟೆಲ್ ಸಿಬ್ಬಂದಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸದ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ದೇಶದ ಜನತೆಗೆ ಬಂಪರ್ ಕೊಡುಗೆ – ಇಂದಿನಿಂದ GST 2.0 ಜಾರಿ.. ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

Btv Kannada
Author: Btv Kannada

Read More