ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ ಕೇಸ್ – ಸ್ಫೋಟಕ 9 ವಿಡಿಯೋಗಳನ್ನು ಹರಿಬಿಟ್ಟ ಮಹೇಶ್ ಶೆಟ್ಟಿ ತಿಮರೋಡಿ!

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಕೇಸ್ ಕುರಿತು ಹಲವು ವಿಚಾರಗಳು ಬಯಲಾಗ್ತಿದ್ದು, ದೂರುದಾರ ಚಿನ್ನಯ್ಯನನ್ನು ಎಸ್​ಐಟಿ ಬಂಧಿಸಿ ಸುದೀರ್ಘ ವಿಚಾರಣೆ ನಡೆಸಿತು. ಸದ್ಯ ಚಿನ್ನಯ್ಯ ಜೈಲು ಪಾಲಾಗಿದ್ದು, ಇದೀಗ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬುರುಡೆ ಕೇಸ್ ಸಂಬಂಧ ಸ್ಫೋಟಕ ವಿಡಿಯೋಗಳನ್ನು ರಿಲೀಸ್ ಮಾಡಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ತಮ್ಮ ವಿರುದ್ಧದ ಷಡ್ಯಂತ್ರದ ಆರೋಪಗಳಿಗೆ ಪ್ರತ್ಯುತ್ತರವಾಗಿ ಒಟ್ಟು 9 ವಿಡಿಯೋಗಳನ್ನು ರಿಲೀಸ್ ಮಾಡಿದ್ದಾರೆ. ಮೊದಲ ಬಾರಿಗೆ ಮಾಸ್ಕ್​​ ಮ್ಯಾನ್​ ಚಿನ್ನಯ್ಯ ಹಾಗೂ ಆತನ ಪತ್ನಿಯನ್ನು ಭೇಟಿ ಮಾಡಿದ್ದರ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

ವಿಡಿಯೋ 1ರಲ್ಲಿ ಏನಿದೆ? 2023ರ ಆಗಸ್ಟ್‌ನಲ್ಲಿ ಚಿನ್ನಯ್ಯ ಹಾಗೂ ಆತನ ಪತ್ನಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮೊದಲ ಬಾರಿಗೆ ಭೇಟಿಯಾದ್ದು, ಚಿನ್ನಯ್ಯ ತಾನಾಗಿಯೇ ಬಂದು ತನಗಾದ ಅನ್ಯಾಯ ಹೇಳಿಕೊಂಡಿದ್ದರು. ಚಿನ್ನಯ್ಯ & ಪತ್ನಿ ಭೇಟಿ ಮಾಡಿದ್ದರಲ್ಲಿ ಯಾವುದೇ ಷಡ್ಯಂತ್ರಗಳೂ ಇರಲಿಲ್ಲ. ಯಾವುದೇ ಷಡ್ಯಂತ್ರ, ಬೆದರಿಕೆಯಾಗಲಿ ಇರಲಿಲ್ಲ ಎಂದು ತಿಮರೋಡಿ ಸ್ಪಷ್ಟನೆ ನೀಡಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಭೇಟಿಯಾಗಿ ಚಿನ್ನಯ್ಯ ಹೂತ ಹೆಣಗಳ ಬಗ್ಗೆ ಹೇಳಿದ್ದ.  ಗುಂಡಿಗಳನ್ನು ತೆಗೆದು ಹೆಣಗಳನ್ನು ಹೂಳುತ್ತಿದ್ದೆ ಎಂದು ತಿಮರೋಡಿಗೆ ಮಾಹಿತಿ ನೀಡಿದ್ದ. ಡಾಕ್ಟರ್​​ಗಳು ಬಾರದೇ ಕಾಂಪೌಂಡರ್​ಗಳೇ ಪೋಸ್ಟ್ ಮಾರ್ಟ್ಂ ಮಾಡ್ತಿದ್ದರು. ಸೌಜನ್ಯ ಪ್ರಕರಣ ಬೇರೆ ಕಡೆ ಮಾತಾಡುತ್ತೇವೆ ಎಂದು ನಮ್ಮನ್ನ ಓಡಿಸಿದ್ರು. ಧರ್ಮಸ್ಥಳದವರು 3.5 ಲಕ್ಷ ಹಣ ಕೊಡಬೇಕು, ನಮಗೆ ಅನ್ಯಾಯ ಮಾಡಿದ್ದಾರೆ. ನಾವು ತುಂಬಾ ಜನರಿಗೆ ಮೂಗು ಬಾಯಲ್ಲಿ ರಕ್ತ ಬರುವಂತೆ ಹೊಡೆದಿದ್ದೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಬಳಿ ಹೇಳಿಕೆ ನೀಡಿರುವ ಚಿನ್ನಯ್ಯ ವಿಡಿಯೋ ರಿಲೀಸ್​ ಮಾಡಿದ್ದಾರೆ.

ವಿಡಿಯೋ  2 : ವಿಡಿಯೋ 2ರಲ್ಲಿ ಸ್ಪೋಟಕ ಮಾಹಿತಿಯಿದೆ. ಗೊಮ್ಮಟ ಬೆಟ್ಟದ ಬಳಿ 75 ಹೆಣಗಳನ್ನು ಹೂತಿದ್ದೆ, ಪಾಂಗಳದಿಂದ ಗೊಮ್ಮಟ ಬೆಟ್ಟಕ್ಕೆ ದಾರಿ ಇದೆ. ಧರ್ಮಸ್ಥಳ ಗ್ರಾಮದಲ್ಲಿ ರಾಶಿ ರಾಶಿ ಶವಗಳನ್ನು ಹೂತಿದ್ದೇನೆ. ತಳ್ಳುವ ತರಕಾರಿ ಗಾಡಿಯಲ್ಲಿ ಶವಗಳನ್ನು ಇಟ್ಕೊಂಡು ಹೋಗ್ತಿದ್ದೆ, ಗಾಡಿಯಲ್ಲಿ ಹೆಣಗಳನ್ನು ತುಂಬಿಕೊಂಡು ಹೋಗಿ ಹೂತು ಹಾಕುತ್ತಿದೆ. ನೇತ್ರಾವತಿ ಸ್ನಾನ ಘಟ್ಟದ ಬಳಿ ಶವಗಳನ್ನು ಹೂತಿದ್ದಕ್ಕೆ ಲೆಕ್ಕವೇ ಇಲ್ಲ, ಪೂಜೆ ಮಾಡುವ ಭಟ್ಟರ ಮನೆ ಮಗಳನ್ನೂ ಹೂತು ಹಾಕಿದ್ದೇನೆ. ಲಂಗ ದಾವಣಿ ಮಾತ್ರ ಇತ್ತು, ಕೊಲೆ ರೀತಿ ಆ ಶವ ಇತ್ತು, ಶಾಲೆ ಹಿಂದೆ ಮನೆ ಬಳಿ ಯುವತಿ ಶವ ಇತ್ತು. ಆಕೆ ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಅವಳ ಸಾವಿಗೆ ಕುಟುಂಬದವರು ಯಾರೂ ಅಳುತ್ತಿರಲಿಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿಗೆ ಹೇಳಿರೋ ಮಾಸ್ಕ್​​ಮ್ಯಾನ್ ಚಿನ್ನಯ್ಯ ಹೇಳಿದ್ದಾನೆ.

ವಿಡಿಯೋ 3 : ಮೂರು ಬಂಡೆ ಕಲ್ಲುಗಳು ಇದ್ವು ಅಲ್ಲೇ ಮಣ್ಣು ಮಾಡ್ತಾ ಇದ್ದೇ, ಜಾಸ್ತಿ ಗುಂಡಿ ತೆಗೆಯಲು ಆಗಲಿಲ್ಲ. ಎಷ್ಟು ಸಾಧ್ಯ ಅಷ್ಟೂ ಮಾಡಿದ್ದೆ. ಬಾಹುಬಲಿ ಬೆಟ್ಟದ ಟರ್ನ್​ ಪಾಯಿಂಟ್​​ನಲ್ಲಿ ಮಣ್ಣು ಮಾಡ್ತಿದ್ದೆ, ರಸ್ತೆ ಪಕ್ಕದ ಬಂಡೆ ಕಲ್ಲುಗಳ ಪಕ್ಕದಲ್ಲೇ ಮಣ್ಣು ಮಾಡ್ತಿದ್ದೆ. ನೇತ್ರಾವತಿ ನದಿ ಬಳಿ 16 ವರ್ಷದ ಹುಡುಗಿಯನ್ನ ಹೂತು ಹಾಕಿದ್ದೆ, ನದಿ ಪಕ್ಕದಲ್ಲಿ ಮಣ್ಣು ಮಾಡುವಾಗ ಪೊಲೀಸರು ಇರ್ತಾ ಇರಲಿಲ್ಲ. ಧರ್ಮಸ್ಥಳ ಟರ್ನ್​ ಪಾಯಿಂಟ್​​ನಲ್ಲಿ ಒಂದೇ ಜಾಗದಲ್ಲಿ 9 ಹೆಣ ಹೂತಿದ್ದೇನೆ,
ನಾನು ಎಲ್ಲೇಲ್ಲಿ ಹೆಣ ಹೂತು ಹಾಕಿದ್ದೇನೆ ಅನ್ನೋ ಎಲ್ಲಾ ಜಾಗ ನನಗೆ ಗೊತ್ತಿದೆ. ಕೋರ್ಟ್​ ಕಡೆಯಿಂದ ಆದೇಶ ಬಂದರೆ ಮಾತ್ರ ನಾನು ಜಾಗ ತೋರಿಸುತ್ತೇನೆ ಎಂದು ಚಿನ್ನಯ್ಯ ಹೇಳಿರುವ ವಿಡಿಯೋ ಬಿಡುಗಡೆಯಾಗಿದೆ.

ವಿಡಿಯೋ 4 : ಈ ವಿಡಿಯೋದಲ್ಲಿ ಮಾಸ್ಕ್​​ ಮ್ಯಾನ್​ ಚಿನ್ನಯ್ಯ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ್ದಾನೆ. ಸಿಕ್ಕ ಹೆಣವನ್ನು ಕುಟುಂಬಕ್ಕೆ ಕೊಡಲು ಆಗಲಿಲ್ಲ,
ನಾವೆಲ್ಲಾ ಹೋದ್ವಿ ನಮ್ಮನ್ನು ಒಳಗೆ ನೋಡಲು ಬಿಡಲಿಲ್ಲ. ಪೊಲೀಸ್​ನವರು ಮಾತ್ರ ಹೆಣದ ಬಳಿ ಹೋದ್ರು. ಸಾಕ್ಷಿಗಳೆಲ್ಲವನ್ನು ನಾಶ ಮಾಡಿದ್ರೋ ಏನೋ ಗೊತ್ತಿಲ್ಲ, ನಮ್ಮ ಮುಂದೆಯೇ ಬೆಳೆದ ಮಗು ಅದು. ಸೌಜನ್ಯ ತಾಯಿಗೆ ಮಾನಸಿಕ ಖಾಯಿಲೆ ಇದೆ ಅಂದ್ರು. ಹೆಣ ತಗೆಯೋ ಮುನ್ನವೇ ಸೌಜನ್ಯ ತಾಯಿಯನ್ನು ಕರ್ಕೊಂಡು ಹೋದ್ರು, ರಸ್ತೆಗೆ ಬಿದಿರು, ಟ್ರಮ್ ಇಟ್ಟು ಬಂದೋಬಸ್ತ್ ಮಾಡಿದ್ರು, ನಿಮ್ಮ ಫ್ಯಾಮಿಲಿಗೆ ಎಣಿಸಲಾಗದಷ್ಟು ಹಣ ಕೊಡ್ತೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಬಳಿ ಚಿನ್ನಯ್ಯ ಹೇಳಿಕೆ ಕೊಟ್ಟಿದ್ದಾರೆ.

ವಿಡಿಯೋ 5 : ಹೈ ಕೋರ್ಟ್ ಗೆ ಹೋದ್ರು ನಾವು ಹೇಳಿ ಕೊಟ್ಟ ಹಾಗೆ ಹೇಳಬೇಕು. ಇದನ್ನೆಲ್ಲಾ ನೋಡಿಕೊಳ್ಳೋಕೆ ಹೆಡ್ ಇದಾರೆ ಅದನ್ನ ಅವರು ನೋಡಿಕೊಳ್ಳುತ್ತಾರೆ.
ನೀವು ಭಯ ಪಡುವ ಅವಶ್ಯಕತೆ ಇಲ್ಲಾ, ನಾನು ಮತ್ತು ನನ್ನ ಹೆಂಡತಿ ನದಿ ಬದಿಯಲ್ಲಿ ಕೆಲಸ ಮಾಡೋದು. ರವಿ ಪೂಜಾರಿ, ಗೋಪಾಲ ಕೃಷ್ಣ, ಮಲ್ಲಿಕ್ ಜೈನ ಪ್ರಮುಖರು. ಮಲ್ಲಿಕ್ ಜೈನ್ ಗೆ ಒಳ್ಳೆ ಒಳ್ಳೆ ಹುಡುಗಿಯರಿಗೆ ನಂಬರ್ ಕೊಡ್ತಾ ಇದ್ದಾ, ಬಾಹುಬಲಿ ಬೆಟ್ಟದ ಹಿಂದೆ ಜೈನರಿಗೆ ಗೆಸ್ಟ್ ಹೌಸ್ ಇದೆ. ಹಂಚಿನ ಮನೆ ಇರುವ ಗೆಸ್ಟ್ ಹೌಸ್ ಅದು. ಗೆಸ್ಟ್ ಹೌಸ್ ಬಳಿ ಬಜ್ಜಿ ಎಲ್ಲಾ ತರಿಸ್ತಾ ಇದ್ರೂ ನಾನು ಕೂಡ ಅವರು ಕೊಟ್ಟಿದ್ದನ್ನ ತಿಂತಾ ಇದ್ದೆ ಎಂದು ಮಹೇಶ್ ಶೆಟ್ಟಿ ತಿಮರೋಡಿಗೆ ಹೇಳಿರೋ ಮಾಸ್ಕ್​​ಮ್ಯಾನ್ ಚಿನ್ನಯ್ಯ ಹೇಳಿದ್ದಾನೆ.

ವಿಡಿಯೋ  6 : ಹೆಣ ಹೂತು ಹಾಕುವಾಗ ಮೈಮೇಲೆ ಇದ್ದ ಒಡೆವೆ ತೆಗದುಕೊಳ್ತಿದ್ದೆ. ನದಿ ತಟದಲ್ಲಿ ಹೆಣ ಹೂತು ಹಾಕಿದ್ದಾಗ ಚಿಲ್ಲರೆ ಹಣ ಕೂಡಾ ತೆಗದುಕೊಳ್ತಿದ್ದೆ,
ನದಿ ಪಕ್ಕದಲ್ಲಿ ಕೂತಿಕೊಂಡು ಹುಡುಕಿದ್ರೆ 500, 600 ರೂಪಾಯಿ ಸಿಗುತ್ತೆ. ಆ ಥರಾ ಸಿಕ್ಕ ಹಣವನ್ನು ನಾನು ಮನೆಗೆ ತೆಗದುಕೊಂಡಿದ್ದೇನೆ, ಸೌಜನ್ಯ ಕಿಡ್ನ್ಯಾಪ್​​​ ಬಗ್ಗೆ ನನಗೆ ಏನು ಗೊತ್ತಿರಲಿಲ್ಲ. ಸೌಜನ್ಯ ಕಿಡ್ನ್ಯಾಪ್​​​ಗೆ ಸಹಾಯ ಮಾಡಿದವನು ತುಂಬಾ ಹೆದರಿಕೊಂಡಿದ್ದ, ಅವನ ಮುಖದಲ್ಲಿ ತುಂಬಾ ಭಯ ಎಂದು ಕಾಣ್ತಾ ಇತ್ತು. ಅವನು ಸೌಜನ್ಯ ಕೊಲೆಯಲ್ಲಿ ಭಾಗಿಯಾಗಿದ್ದಕ್ಕೆ ಭಯ ಪಟ್ಟಕೊಂಡಿದ್ದ. ಅಲ್ಲಿ ಏನೆಲ್ಲಾ ಆಯ್ತು ಅನ್ನೋದರ ಕಂಪ್ಲೀಟ್​​​ ಡಿಟೇಲ್ಸ್​​​​​​​​​​​​​​​​​ ಗೊತ್ತಿತ್ತು ಎಂದಿದ್ದಾನೆ ಚಿನ್ನಯ್ಯ.

ವಿಡಿಯೋ 7 : ರವಿ ಪೂಜಾರಿ ವಯಸ್ಸು 25 ವರ್ಷದ ಒಳಗಿದೆ. ಸಿಬ್ಬಂದಿಗಳಿಗೆಲ್ಲ ಮದುವೆ ಆದ್ರೆ ಮಾತ್ರ ಧರ್ಮಸ್ಥಳ ದಲ್ಲಿ ಸಾಲ ಕೊಡೋದು, ರವಿ ಪೂಜಾರಿಗೆ ಮದುವೆಯೇ ಆಗಿಲ್ಲ ಆದರೂ ಅವನಿಗೆ 25 ಸಾವಿರ ಹಣ ನೀಡಿದ್ದಾರೆ. ಅವನಿಗೆ ದುಡ್ಡು ಯಾಕೆ ಕೊಟ್ಟರು ನಮಗೆ ಗೊತ್ತಿಲ್ಲ, ಹಣ ಕೊಟ್ಟ ಬಗ್ಗೆ ಹೊರಗೆ ಹೇಳಬೇಡ ಎಂದು ರವಿ ಪೂಜಾರಿಗೆ ಹಣ ಕೊಟ್ಟಿದಾರೆ. ಅವನು ದುಡ್ಡನ್ನ ಮನೆಗೆ ಸ್ವಲ್ಪ ಕೊಟ್ಟಿದ್ದಾನೆ, ಉಳಿದ ದುಡ್ಡನ್ನು ಖರ್ಚು ಮಾಡಿದ್ದಾನೆ. ರೇವತಿ ಎಂಬ ಹುಡುಗಿಗೆ ವೈನ್ ಶಾಪ್ ಅಂಗಡಗೆ 4 ಸಾವಿರ ಹಣ ಕೊಟ್ಟಿದ್ದ, ಅವಳ ಬಳಿ ಕಷ್ಟ ರವಿ ಪೂಜಾರಿ ಕಷ್ಟ ಹೇಳಿಕೊಳ್ಳುತ್ತಿದ್ದ. ಕುಡಿದ ಮತ್ತಿನಲ್ಲಿ ಸೌಜನ್ಯ ವಿಷಯದ ಬಗ್ಗೆ ಬಾಯಿ ಬಿಟ್ಟಿದ್ದ,
ಸಣ್ಣ ದಣಿಗಳ ಮಗ ಸೌಜನ್ಯನ ಕೊಡದ್ದು ಎಂದು ಬಾಯಿಬಿಟ್ಟ. ಕುಡಿದ ಮತ್ತಿನಲ್ಲಿ ಹೇಳಿದ ಮಾತು ಯಾರು ನಂಬುತ್ತಾರೆ ಎಂದು ಸುಮ್ಮನಾದೆ, ಅವತ್ತು ಸಾಯಂಕಾಲ 3:30 ಕ್ಕೆ ಮ್ಯಾನೇಜರ್ ಬಾಲಕೃಷ್ಣ, ರಾಜೇಶ್ ಬಂದರು. ಇಬ್ಬರು ಬಂದು ರವಿ ಪೂಜಾರಿಗೆ ಜೋರು ಮಾಡಿದರು, ಬಾಲಕೃಷ್ಣ ನಾಯಕ್ ಅವರು ತೀರಿ ಹೋಗಿದ್ದಾರೆ, ಸೌಜನ್ಯ ಸತ್ತಮೇಲೆ ಇವರಿಗೆಲ್ಲ ಮ್ಯಾನೇಜರ್ ಪೋಸ್ಟ್ ಸಿಕ್ಕಿದ್ದು ಎಂದು ಚಿನ್ನಯ್ಯ ಹೇಳಿದ್ದಾನೆ.

ವಿಡಿಯೋ 8 : ಸೌಜನ್ಯ ಘಟನೆ ಆದ್ಮೇಲೆ ಆತ ತುಂಬಾ ಹೆದರಿಕೊಂಡಿದ್ದ. ಸ್ವಲ್ಪ ದಿನ ಆತ ಕೆಲಸಕ್ಕೆ ಹೋಗಿರಲಿಲ್ಲ, ನನಗೆ ಬಂದು ಕೇಳಿದ್ರು ನೀನು ಯಾಕೆ ಬಾಹುಬಲಿ ಬೆಟ್ಟಕ್ಕೆ ಹೋಗ್ತಿಲ್ಲ ಅಂತಾ, ಬಾಹುಬಲಿ ಬೆಟ್ಟದ ಕೆಲಸವನ್ನು ಬಿಟ್ಟು ಅವನು ನೇತ್ರಾವತಿ ನದಿ ತಡದಲ್ಲಿ ಕೆಲಸ ಶಿಫ್ಟ್​ ಮಾಡಿಕೊಂಡ. ಕೆಲಸಕ್ಕೆ ಹೋಗಲು ಆತ ತುಂಬಾ ಭಯ ಪಟ್ಟುಕೊಂಡಿದ್ದ, ಅವರ ಜೊತೆ ಊಟ ಮಾಡಲು ಕೂಡಾ ಹೆದರಿಕೊಂಡಿದ್ದ. ವಿಷ ಹಾಕಿ ಕೊಡ್ತಾರಾ ಅಂತಾ ತುಂಬಾ ಭಯಪಟ್ಟಿದ್ದ, ಆತ ಟೀ ಕುಡಿದು ಬಂದ ತಕ್ಷಣ ಅವನ ಕುತ್ತಿಗೆ ಬಿಗಿದಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿಗೆ ಹೇಳಿರೋ ಮಾಸ್ಕ್​​ಮ್ಯಾನ್ ಚಿನ್ನಯ್ಯ ಹೇಳಿದ್ದಾನೆ.

ವಿಡಿಯೋ 9 : ಯೋಗೀಶ ಎಂಬ ರೂಮ್ ಬಾಯ್ ಇದ್ದ, ಅವರ ಜಾತಿ ಯಾವುದು ಗೊತ್ತಿಲ್ಲ. ಹೆಂಗಸಿನ ದುಪ್ಪಟ್ಟದಲ್ಲಿ ನೇಣು ಹಾಕಿದ್ದಾರೆ, ದಂಡೆ ಬದಿ ಬಿಟ್ಟಿರುವ ಬಟ್ಟೆಗಳನ್ನು ಎತ್ತಿಟ್ಟಿರುತ್ತಾರೆ. ಅದರಲ್ಲಿ ಯಾವುದೊ ಒಂದು ದುಪ್ಪಟ್ಟದಿಂದ ನೇಣು ಹಾಕಿ ಪೊಲೀಸರು ಬರೋ ಮುಂಚೆ ಇಳಿಸಿದ್ದಾರೆ. ನಮ್ಮನ್ನ ಹತ್ತಿರ ಬರಬೇಡಿ ಎಂದು ಹೇಳಿದ್ದರು. ಭಯದಲ್ಲಿ ನಾವು ನಮ್ಮ ಕೆಲಸಕ್ಕೆ ಮಾಡಿಕೊಂಡು ಹೋಗ್ತಾ ಇದ್ವಿ, ಆ ಹೆಣವನ್ನು ಬೆಳ್ತಂಗಡಿಗೆ ಕೊಟ್ರ ಇಲ್ಲಾ ಅವರ ಮನೆಗೆ ಕೊಟ್ರಾ ಗೊತ್ತಿಲ್ಲ. ಆ ಹೆಣವನ್ನು ನಮ್ಮ ಕೈಯಲ್ಲಿ ಮುಟ್ಟಿಸಿಲ್ಲ ಅದನ್ನ ರೂಮ್ ಬಾಯ್ಸ್ ಇಳಿಸಿಕೊಂಡರು, ಹೆಣ ಇಳಿಸಿ ಇಟ್ಟುಕೊಂಡು ಹೋಗುವಾಗ ಪೊಲೀಸರು ಬಂದದ್ದು. ಪೊಲೀಸರು ಸಹ ಏನು ಮಾಡಿಲ್ಲ ಅವರು ಹೆಣ ಏನು ಮಾಡಿದರು ಗೊತ್ತಿಲ್ಲ ಎಂದು ಚಿನ್ನಯ್ಯ ಹೇಳಿದ್ದಾನೆ.

ಈ ವೇಳೆ 9,10,11 ತಾರೀಕಿಗೆ ಹರ್ಷವರ್ಧನ್ ಮಗನನ್ನ ನೋಡಿದ್ದೀರಾ ಎಂದು ತಿಮ್ಮರೋಡಿ ಪ್ರಶ್ನೆ ಮಾಡಿದ್ದು, ಅದಕ್ಕೆ ಚಿನ್ನಯ್ಯ ಉತ್ತರಿಸಿ, ಅವರೂ ಕಾಣಲಿಲ್ಲ ಇದ್ದ ಸಾಕ್ಷಿಯನ್ನು ಅಳಿಸಿ ಬಿಟ್ಟರು. ಮುಖ್ಯವಾದ ಸಾಕ್ಷಿ ಎಂದರೆ ನೇತ್ರಾವತಿ ಆಸ್ಪತ್ರೆ ಎದುರು ಕ್ಯಾಮೆರಾ ಇರುವುದು ಮಾತ್ರ ಜನರಿಗೆ ಗೊತ್ತು, ಅದರ ಎದುರುಗಡೆ ಬಸ್ ಸ್ಟಾಂಡ್ ಇತ್ತು ಅದರಲ್ಲಿ ದೊಡ್ಡ ಡ್ಯೂಮಿನ ಹಾಗೆ ಕ್ಯಾಮೆರಾ ಇತ್ತು. ನೇತ್ರಾವತಿ ಹೊಳೆಯಿಂದ ಹೋಟೆಲ್ ವರೆಗೆ ಓಡಾಡುವುದು ಅದ್ರಲ್ಲಿ ಕಾಣುತ್ತದೆ, ದೊಡ್ಡ ಕ್ಯಾಮೆರಾ ಬಸ್ ಸ್ಟ್ಯಾಂಡ್ ಬಳಿ ಇತ್ತು. ತಿರುಗುವ ಕ್ಯಾಮೆರಾ ಆ ಬಸ್ ಸ್ಟಾಂಡ್ ಅಲ್ಲಿ ಇದೆ. ಇದಾದ ಬಳಿಕ ಅಲ್ಲಿ ಕ್ಯಾಮೆರಾ ಕೂಡ ಕಾಣಲಿಲ್ಲ ಬಸ್ ಸ್ಟ್ಯಾಂಡ್ ಕೂಡ ಕಾಣಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ನಡುರಸ್ತೆಯಲ್ಲಿ ಲಾಂಗ್ ಬೀಸಿ ಹವಾ ಮೈಂಟೇನ್ ಮಾಡಿದ್ದ ಗ್ಯಾಂಗ್ ಅರೆಸ್ಟ್!

Btv Kannada
Author: Btv Kannada

Read More