ಬೆಂಗಳೂರು : ನಡುರಸ್ತೆಯಲ್ಲಿ ಲಾಂಗ್ ಬೀಸಿ ಹವಾ ಮೈಂಟೇನ್ ಮಾಡಿದ್ದ ಗ್ಯಾಂಗ್ ಅರೆಸ್ಟ್!

ಬೆಂಗಳೂರು : ನಡುರಸ್ತೆಯಲ್ಲಿ ಲಾಂಗ್ ಬೀಸಿ ಹವಾ ಮೈಂಟೇನ್ ಮಾಡಿದ್ದ ಡಾಲಿ ಗ್ಯಾಂಗ್​​ನ್ನು ಚಂದ್ರಾಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡಾಲಿ @ ದಿಲೀಪ, ರವಿ, ಪ್ರಜ್ವಲ್ ಹಾಗೂ ಅರುಣ್ ಬಂಧಿತ ಆರೋಪಿಗಳು.

ಈ ಗ್ಯಾಂಗ್ ನಾಗರಭಾವಿ ಔಟರ್ ರಿಂಗ್ ರೋಡ್​ನ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಜನರನ್ನ ಬೆದರಿಸಿತ್ತು. ಧೀರಜ್ ಹಾಗೂ ಸುಧಾಕರ್ ಎಂಬ ಯುವಕರ ಮೇಲೆ ಲಾಂಗ್ ಬೀಸಿದ್ದರು. ಈ ವೇಳೆ ಡಾಲಿ ಗ್ಯಾಂಗ್​ನ ಲಾಂಗ್ ಏಟಿಗೆ ಧೀರಜ್ ಹಾಗೂ ಸುಧಾಕರ್ ಬೈಕ್ ಏರಿ ತಪ್ಪಿಸಿಕೊಂಡಿದ್ರು.

ಅವರು ಸಿಗದಿದ್ದಕ್ಕೆ ಆರೋಪಿಗಳು ರಸ್ತೆಯಲ್ಲಿ ನಿಂತಿದ್ದ ಕಾರು ಹಾಗೂ ಅಂಗಡಿಗಳ ಮೇಲೆ ಮಚ್ಚು ಬೀಸಿದ್ದರು. ಸದ್ಯ ಚಂದ್ರಾಲೇಔಟ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : “ಕರಾಸ್ತ್ರ” ಚಿತ್ರದ ಟ್ರೈಲರ್ ರಿಲೀಸ್ – ಸೆ.26ಕ್ಕೆ ಸಿನಿಮಾ ತೆರೆಗೆ!

Btv Kannada
Author: Btv Kannada

Read More