ದಾವಣಗೆರೆ : ಕೋರ್ಟ್ ಆವರಣದಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕು ಇರಿದ ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾದ ಮಹಿಳೆಯನ್ನು ಪದ್ಮಾವತಿ (30) ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಪ್ರವೀಣ್ ಕುಮಾರ್ ಎಂದು ತಿಳಿದುಬಂದಿದೆ.
ಇಬ್ಬರು ಡಿವೋರ್ಸ್ ಅರ್ಜಿ ವಿಚಾರಣೆ ಹಿನ್ನೆಲೆ ಕೋರ್ಟ್ಗೆ ಆಗಮಿಸಿದ್ದರು. ಈ ವೇಳೆ ಆರೋಪಿ ಏಕಾಏಕಿ ಮಹಿಳೆಗೆ ಪ್ರವೀಣ್ ಚಾಕು ಇರಿದಿದ್ದಾನೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಪ್ರವೀಣ್ ಕುಮಾರ್ ವಿರುದ್ಧ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ಪದ್ಮಾ ಮತ್ತು ಪ್ರವೀಣ್, ಒಂದು ಹೆಣ್ಣು ಮಗುವಿದೆ. ಪ್ರವೀಣ್ ಯಾವಾಗಲೂ ಶೀಲ ಶಂಕಿಸಿ ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದ. ಕಳೆದ ಒಂದು ವರ್ಷದ ಹಿಂದೆ ಇಬ್ಬರ ದಾಂಪತ್ಯ ಜೀವನ ಸಾಕಷ್ಟು ಹದಗೆಟ್ಟಿತ್ತು. ಹೀಗಾಗಿ ಸಂಸಾರ ಮಾಡಲು ಆಗುವುದಿಲ್ಲ ಎಂದು ಪದ್ಮಾ ಡೈವೋರ್ಸ್ಗೆ ಪದ್ಮಾ ಅಪ್ಲೈ ಮಾಡಿದ್ದಳು.
ಇನ್ನು ವರ್ಷದ ಹಿಂದೆ ಸಹ ಬೆಂಗಳೂರಿನಲ್ಲಿ ಪದ್ಮಾ ಕೊಲೆ ಮಾಡಲು ಪ್ರವೀಣ್ ಯತ್ನಿಸಿದ್ದ. ಇವತ್ತು ಡಿವೋರ್ಸ್ ವಿಚಾರಕ್ಕೆ ಕೋರ್ಟ್ಗೆ ಹಾಜರಾದ ವೇಳೆ ಪ್ರವೀಣ್ ಏಕಾಏಕಿ ಪದ್ಮಾನಿಗೆ ಚಾಕು ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪದ್ಮಾಳನ್ನು ತಕ್ಷಣ ಸಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ರಾಜಕೀಯ ವೈರತ್ವ ಬಿಟ್ಟು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹೆಚ್ಡಿಕೆ-ಡಿಕೆಶಿ!







