ಬೆಂಗಳೂರು : ನಗರದ ಈಸ್ಟ್ ಫೊಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೇರಳ ಮೂಲದ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ನಡುವೆ ನಡೆದ ಈ ಮಾರಾಮಾರಿಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇದೀಗ ವಿದ್ಯಾರ್ಥಿಗಳ ಹೊಡೆದಾಟ ಕೇಸ್ ಸಂಬಂಧ ಮಾತನಾಡಿದ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕೇಸ್ ಮಾಡಿ ಹೇಳಿಕೆ ಪಡೆದು ಕ್ರಮ ಕೈಗೊಳ್ಳಲಾಗಿದೆ. ಮುಂದೆ ಈ ರೀತಿ ಘಟನೆಗಳು ಆಗದಂತೆ ಬೇರೆ ಕಾಲೇಜಿನ ಆಡಳಿತ ಮಂಡಳಿಗೂ ತಿಳಿಸಿದ್ದೇವೆ. ಏನೇ ಕಾರ್ಯಕ್ರಮ ಇದ್ರೂ ಮೊದಲು ಪೊಲೀಸರ ಜೊತೆ ಚರ್ಚೆ ಮಾಡ್ಬೇಕು. ಸಭೆ ನಡೆಸಿ ಪೊಲೀಸರ ಸೂಚನೆಯಂತೆ ನಡೆಸಬೇಕು ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಆಗಿದ್ದೇನು? ಈಸ್ಟ್ ಫೊಸ್ಟ್ ಕಾಲೇಜಿನ ಓಣಂ ಸಂಭ್ರಮಾಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಸಿಕ್ಕ ಸಿಕ್ಕ ವಸ್ತುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸಿನಿಮಾ ಶೈಲಿಯಲ್ಲಿ ಎರಡು ಗುಂಪುಗಳಾಗಿ ಭಾರೀ ಫೈಟ್ ಮಾಡಿದ್ದು, ಗೂಳಿ ಕಾಳಗದಂತೆ ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲಿ ಪರಸ್ಪರ ಬಡಿದಾಡಿದ್ದಾರೆ. ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ : ‘ಕಾಂತಾರ ಚಾಪ್ಟರ್1’ ಅಪ್ಡೇಟ್ಗಾಗಿ ಕಾಯ್ತಿದ್ದವರಿಗೆ ಗುಡ್ನ್ಯೂಸ್.. ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್!







