ಬೆಂಗಳೂರು : ರಾಜ್ಯದ ಪೊಲೀಸರು ಜನರ ರಕ್ಷಣೆಗೆ ಇದ್ದಾರಾ ಅಥವಾ ಲೂಟಿಗೆ ಇಳಿದಿದ್ದಾರಾ ಅನ್ನೋ ಭಾರೀ ಚರ್ಚೆ ಶುರುವಾಗಿದೆ. ಯಾಕಂದ್ರೆ ಪೊಲೀಸರು ಕಂಡ ಕಂಡವರ ಬಳಿ ಹಣಕ್ಕಾಗಿ ಕಿರುಕುಳ ಕೊಡ್ತಿದ್ದಾರೆ. ಇದೀಗ ಆಯುಧ ಪೂಜೆ ನೆಪದಲ್ಲಿಯೂ ಠಾಣೆಗಳಲ್ಲಿ ಭರ್ಜರಿ ರೋಲ್ಕಾಲ್ ನಡೆಯುತ್ತಿದ್ದು, ವರ್ಗಾವಣೆ ಮುನ್ನ ಆಯುಧ ಪೂಜೆ ಹೆಸರಲ್ಲಿ ಪೊಲೀಸರು ಅಮಾಯಕರಿಂದ ಕೋಟಿ ಕೋಟಿ ಹಣ ವಸೂಲಿ ಮಾಡ್ತಿದ್ದಾರೆ.

ಹೌದು.. ರೌಡಿಶೀಟರ್, ಕಳ್ಳರು, ರಿಯಲ್ ಎಸ್ಟೇಟ್ ಮಾಫಿಯಾದಿಂದ ಪೊಲೀಸ್ ರೋಲ್ಕಾಲ್ ನಡೆಯುತ್ತಿದೆ. ಆಯುಧ ಪೂಜೆಗೆ ಹಣ ಕಲೆಕ್ಟ್ ಮಾಡೋದೇ ಈಗ ಪೊಲೀಸರ ಕೆಲಸವಾಗಿದೆ. ಪ್ರತಿ ಪೊಲೀಸ್ ಕಾನ್ಸ್ಟೇಬಲ್ಗೂ ಆಯುಧ ಪೂಜೆಯ ಕಲೆಕ್ಷನ್ ಟಾರ್ಗೆಟ್ ನೀಡಲಾಗಿದೆ. ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಯಲ್ಲೂ ಆಯುಧ ಪೂಜೆಗಾಗಿ ಕೋಟಿ ಕೋಟಿ ಕಲೆಕ್ಷನ್ ಮಾಡಲಾಗುತ್ತಿದೆ.

ಹಣ ನೀಡೋದಿಕ್ಕೆ ಆಗದೇ ಇರೋರು ಮಂಡಕ್ಕಿ, ಸ್ವೀಟು, ಕುಕ್ಕರ್ ನೀಡ್ಲೇಬೇಕು. ಎಲ್ಲಾ ಅಂಗಡಿಗಳಿಂದ ಹಣ, ಗಿಫ್ಟ್ ಕಲೆಕ್ಷನ್ ಮಾಡ್ತಿರೋ ಪೊಲೀಸರು, ಅಕ್ಟೋಬರ್ ವರ್ಗಾವಣೆಗೂ ಮುನ್ನ ಕೋಟಿ ಕೋಟಿ ಕಲೆಕ್ಷನ್ ಗುರಿ ಇಟ್ಟಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಪೊಲೀಸರಿಗೆ ಆಯುಧ ಪೂಜೆಯ ಕಲೆಕ್ಷನ್ ಡ್ಯೂಟಿ ನೀಡಲಾಗಿದ್ದು, ಇನ್ಸ್ಪೆಕ್ಟರ್ಗಳ ಕಾಟಕ್ಕೆ, ಹಣದ ದಾಹಕ್ಕೆ ಠಾಣಾ ಸಿಬ್ಬಂದಿಗಳು ಬೇಸತ್ತು ಹೋಗಿದ್ದಾರೆ.

ಹೀಗಾಗಿ, ನಗರ ಪೊಲೀಸ್ ಆಯುಕ್ತರೇ, DG-IGP ಸಾಹೇಬ್ರೇ ನಿಮ್ಮ ವ್ಯಾಪ್ತಿಯ ಠಾಣೆಗಳ ಬಗ್ಗೆ ಗಮನಹರಿಸಿಬೇಕಾಗಿದೆ. ಠಾಣೆಯಲ್ಲಿರುವ ಗನ್, ಲಾಠಿಗೆ ಆರತಿ ಎತ್ತೋದಿಕ್ಕೆ ಕೋಟಿ ಕೋಟಿ ಬೇಕಾ? ಆಯುಧ ಪೂಜೆಗೆ ಪೊಲೀಸರೇ ರೌಡಿಗಳಿಂದ ಕಲೆಕ್ಷನ್ ಮಾಡಿದ್ರೆ ಸಮಾಜದ ಗತಿ ಏನು? ಆಯುಧ ಪೂಜೆಗೆ ಕಲೆಕ್ಷನ್ ಮಾಡ್ತಿರುವ ಪೊಲೀಸರ ಮೇಲೆ ಕೂಡಲೇ FIR ದಾಖಲಿಸಿ ಯಾವ್ಯಾವ ಇನ್ಸ್ಪೆಕ್ಟರ್ಸ್ ಕಲೆಕ್ಷನ್ ಮಾಡಿಸ್ತಿದ್ದಾರೋ ಅವರನ್ನು ಸಸ್ಪೆಂಡ್ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


ಇದನ್ನೂ ಓದಿ : ಬೆಂಗಳೂರಲ್ಲಿ ಕ್ರೈಂ ರೇಟ್ ಹೆಚ್ಚಳ – ರೌಡಿಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ!







