ಬೆಂಗಳೂರು : ರಾಜ್ಯ ಸರ್ಕಾರವು ಸೆ.22ರಿಂದ ಅ.7ರವರೆಗೆ 15 ದಿನಗಳ ಕಾಲ ಹೊಸ ಸಾಮಾಜಿಕ-ಶೈಕ್ಷಣಿಕ ಜಾತಿ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆ ಸಮುದಾಯದವರು ಕಡ್ಡಾಯವಾಗಿ ಒಕ್ಕಲಿಗ ಎಂದೇ ನಮೂದಿಸಬೇಕು ಎಂದು ಇತ್ತೀಚೆಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮನವಿ ಮಾಡಿದ್ದರು.
ಹಾಗೆಯೇ ಜಾತಿಗಣತಿ ಸಂಬಂಧ ನಿರಂತರವಾಗಿ ಒಕ್ಕಲಿಗ ಸಮುದಾಯದ ಜಾಗೃತಿ ಸಭೆಗಳನ್ನು ಮಾಡುತ್ತಿರುವ ಶ್ರೀಗಳು, ನಾಳೆ ಒಕ್ಕಲಿಗ ನಾಯಕರ ಸಭೆ ಕರೆದಿದ್ದಾರೆ. ಜಾತಿ ಗಣತಿಯಲ್ಲಿ ಒಕ್ಕಲಿಗರ ನಿಲುವಿನ ಬಗ್ಗೆ ಚರ್ಚಿಸಲು ಮೂರು ಪಕ್ಷಗಳ ಒಕ್ಕಲಿಗ ನಾಯಕರಿಗೆ ನಿರ್ಮಲಾನಂದನಾಥ ಶ್ರೀ ಸಭೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ನಾಳೆ ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸಭೆ ನಡೆಯಲಿದ್ದು, ಡಿಸಿಎಂ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯವರು ಸೇರಿ ಹಲವು ಒಕ್ಕಲಿಗ ನಾಯಕರು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಡಿಕೆಶಿ ತಾಕತ್ತು.. ಕಾರ್ಪೊರೇಟ್ ಕಂಪನಿ ತೆಪ್ಪಗಾಯಿತು!







