ಬೆಂಗಳೂರು : ಬೆಂಗಳೂರಿನ ಕೊಡಿಗೇಹಳ್ಳಿ ಇನ್ಸ್ ಪೆಕ್ಟರ್ ಮುತ್ತರಾಜ್ಗೆ ಲ್ಯಾಂಡ್ ಮಾಫಿಯಾ ಟೀಂ ಖೆಡ್ಡಾ ತೋಡಿದ್ದು, ಈ ಟೀಂ ಇನ್ಸ್ ಪೆಕ್ಟರ್ ಮುತ್ತುರಾಜ್ ಸೀಟನ್ನು ಕಬ್ಜಾ ಮಾಡೋಕೆ ಸ್ಕೀಮ್ ಹಾಕಿತ್ತು. ಇದೀಗ ಇನ್ಸ್ಪೆಕ್ಟರ್ ಮುತ್ತುರಾಜ್ ವಿರುದ್ಧ ನಡೆದ ಪಿತೂರಿ ಬಟಾ ಬಯಲಾಗಿದ್ದು, ಈ ಮೂಲಕ ವಂಚನೆ ಪ್ರಕರಣದಲ್ಲಿ ಕೊಡಿಗೇಹಳ್ಳಿ ಇನ್ಸ್ ಪೆಕ್ಟರ್ ಮುತ್ತರಾಜ್ಗೆ ಕ್ಲೀನ್ ಚಿಟ್ ಸಿಕ್ಕಿದೆ.

ಹೌದು.. ಲ್ಯಾಂಡ್ ಮಾಫಿಯಾ ಟೀಂನಿಂದಲೇ NTI ಲೇಔಟ್ ಹೆಸರಲ್ಲಿ ಮುತ್ತುರಾಜ್ ಅವರನ್ನು ಮುಗಿಸೋ ಪ್ಲ್ಯಾನ್ ನಡೆದಿತ್ತು. ಅದಕ್ಕಾಗಿ ಪಿತೂರಿಗಾರರು ಸಂಜಯ್ ಎಂಬ ವಂಚಕನನ್ನ ಬಳಸಿಕೊಂಡಿದ್ದು, ಸೈಟ್ ನಂ. 71 ಅನ್ನು ನಕಲಿ ದಾಖಲೆ ಸೃಷ್ಠಿಸಿ ಸಂಜಯ್ ಕಬಳಿಸಿದ್ದ. ನಕಲಿ ಮಾಲೀಕನನ್ನು ಸೃಷ್ಠಿಸಿ ಸಂಜಯ್ ಸೈಟನ್ನು ಒಳಗಾಕಿಸಿಕೊಂಡಿದ್ದ. ಎಲ್ಲಾನೂ ನಕಲಿ ಅಂತ ಗೊತ್ತಾಗ್ತಿದ್ದಂತೆ ಲ್ಯಾಂಡ್ ಮಾಲೀಕರು ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಇನ್ಸ್ ಪೆಕ್ಟರ್ ಮುತ್ತುರಾಜ್ಗೆ ಹೇಮಾ ಅರಸ್ ಎಂಬುವವರು ದೂರು ನೀಡಿದ್ದು, ಆರೋಪಿ ಸಂಜಯ್ನನ್ನು 14 ದಿನ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಸಂಜಯ್ ಸಾಚಾ ಅಂತ ಬಿಂಬಿಸೋ ಕಾರ್ಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಸಫಲವಾಗಿದ್ದು, ಪಿತೂರಿ ಮಾಡಿದ್ದ ಟೀಂ ಇನ್ಸ್ ಪೆಕ್ಟರ್ ಮುತ್ತುರಾಜ್ ಮೇಲೆ ಕಟ್ಟುಕಥೆ ಕಟ್ಟಿತ್ತು. ಈ ಗ್ಯಾಂಗ್ ಅಮಾಯಕ, ಏನೂ ತಪ್ಪಿಲ್ಲದ ಇನ್ಸ್ಪೆಕ್ಟರ್ ಮುತ್ತರಾಜ್ ಮೇಲೆ ಕತ್ತಿ ಮಸೆದಿದ್ದು, ಚೇತನ್ ಎಂಬುವವರ ಮೇಲೂ ಖತರ್ನಾಕ್ ಟೀಂ ಸದಸ್ಯರು ಪಿತೂರಿ ನಡೆಸಿತ್ತು. ಇಲ್ಲಸಲ್ಲದ ಆರೋಪ ಮಾಡಿ ಚೇತನ್ರನ್ನು ಕೂಡ ಮುತ್ತುರಾಜ್ ಜೊತೆ ತುಳಿದಿದ್ರು. ವಂಚಕ ಸಂಜಯ್ ಯಾರದ್ದೋ ಸೈಟನ್ನು ತನ್ನ ಸೈಟಾಗಿಸಿಕೊಳ್ಳೋಕೆ ಹೋಗಿದ್ದ. ಸಂಜಯ್, ನಿವೇಶನ ಕಬಳಿಸಲು ನಕಲಿ ವ್ಯಕ್ತಿ ಗಣೇಶ್ ಪ್ರಸಾದ್ ರೆಡಿ ಮಾಡಿದ್ದ. ನಕಲಿ ಗಣೇಶ್ ಪ್ರಸಾದ್ರನ್ನು ಹುಟ್ಟಿಹಾಕಿ ಸೈಟ್ ರಿಜಿಸ್ಟ್ರೇಷನ್ ಕೂಡ ಮಾಡಿಸಿಕೊಂಡಿದ್ದ.
ಗಣೇಶ್ ಪ್ರಸಾದ್ ಆಧಾರ್ ಕಾರ್ಡ್ನಲ್ಲೂ ಸಂಜಯ್ ತನ್ನ ನಂಬರ್ ಸೇರಿಸಿಕೊಂಡಿದ್ದ. ಯಾರಾದ್ರು ನೋಡ್ತಾರಂತ ಒಂದೇ ತಿಂಗಳಲ್ಲಿ ಫೋನ್ ನಂಬರ್ ಚೇಂಜ್ ಮಾಡಿದ್ದ. ಅಷ್ಟೇ ಅಲ್ಲದೇ ಕೋಟಿ ಕೋಟಿ ಸೈಟ್ ಕಬಳಿಸಲು ದಯಾನಂದ್ ಎಂಬುವವನಿಂದಲೂ ಪ್ಲ್ಯಾನ್ ತೆಗೆದುಕೊಂಡಿದ್ದ. ವಂಚಕ ಸಂಜಯ್ ಬಂಧನ ಅಕ್ರಮ ಎಂದು ದಯಾನಂದ್ ಬಾಯಿಬಡಿದುಕೊಂಡಿದ್ದ. ಕೊಡಿಗೇಹಳ್ಳಿ ಸುತ್ತಮುತ್ತ ಖಾಲಿ ಸೈಟ್ಗಳಿಗೆ ಮಾಸ್ಟರ್ ದಯಾನಂದ್ ಕನ್ನ ಹಾಕಿದ್ದು, ವಂಚಕರಾದ ಸಂಜಯ್, ದಯಾನಂದ್ ಜೊತೆ ಒಬ್ಬ ಪೊಲೀಸ್ ಅಧಿಕಾರಿಯೂ ಶಾಮೀಲಾಗಿದ್ದಾರೆ.
ಲಕ್ಷ ಲಕ್ಷದ ಲಂಚದ ಆಸೆಗೆ ಸಂಜಯ್ ಟಿಂಗೆ ಪೊಲೀಸ್ ಅಧಿಕಾರಿಯ ಫುಲ್ ಸಾಥ್ ಕೊಟ್ಟಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಶಾಮೀಲಾದ ಆ ಪೊಲೀಸಪ್ಪನ ಹೆಸರು ರಿವೀಲ್ ಆಗಲಿದೆ. ಸೈಟ್ ಆಸೆಗೆ ಕೊಡಿಗೇಹಳ್ಳಿ ಇನ್ಸ್ ಪೆಕ್ಟರ್ ಮುತ್ತರಾಜ್ ಮೇಲಿನ ಆರೋಪ ಶುದ್ಧ ಸುಳ್ಳು. ಇದೀಗ ವಂಚನೆ ಪ್ರಕರಣದಲ್ಲಿ ಕೊಡಿಗೇಹಳ್ಳಿ ಇನ್ಸ್ ಪೆಕ್ಟರ್ ಮುತ್ತರಾಜ್ಗೆ ಕ್ಲೀನ್ ಚಿಟ್ ಸಿಕ್ಕಿದೆ.
ಇದನ್ನೂ ಓದಿ : ಕುಡಿದ ಮತ್ತಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ – ಪುಡಿರೌಡಿ ಅರೆಸ್ಟ್!







