ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಿನ್ನೆ ದೇಶ, ವಿದೇಶದಿಂದ ವಿವಿಧ ರೀತಿಯಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಇನ್ನು ಬೆಂಗಳೂರಿನಲ್ಲಿ ಡ್ರೋನ್‌ಗಳ ಮೂಲಕ ಪ್ರಧಾನಿ ಮೋದಿಗೆ ವಿಶಿಷ್ಟವಾಗಿ ಜನ್ಮದಿನದ ಶುಭಾಶಯ ಕೋರಲಾಗಿದೆ. ಹಲಸೂರಿನ ಆರ್‌ಬಿಎನ್‌ಎಂಎಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 1000 ಡ್ರೋನ್‌ಗಳು 300 ಅಡಿ ಎತ್ತರದಲ್ಲಿ ಮೋದಿ ಭಾವ ಚಿತ್ರ ಪ್ರದರ್ಶನ ಮಾಡಿದ್ದು, ಆಗಸದಲ್ಲಿ ‘OUR VESSIONER LEADER’ ಎಂದು ಡ್ರೋನ್ ಮೂಲಕ ಬರೆದು ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ.

ಸುಮಾರು 15 ನಿಮಿಷ ಡ್ರೋ ಶೋ ನಡೆಸಲಾಗಿದ್ದು, ಆಗಸದಲ್ಲಿ ಪ್ರಧಾನಿ ಮೋದಿ ಅವರ ಮಹತ್ವಪೂರ್ಣ ಯೋಜನೆಗಳ ಚಿತ್ತಾರ ಬಿಡಿಸಲಾಗಿದೆ. ಮೇಕ್‌ಇನ್ ಇಂಡಿಯಾ, ಸ್ವಚ್ಛ ಭಾರತ್ ಚಿತ್ರಗಳನ್ನೂ ಬರೆಯಲಾಗಿದೆ. ಕೊನೆಯದಾಗಿ ’75th HAPPY BIRTHDAY MODI JI’ ಅಂತ ಬರಹದ ಮೂಲಕ ಶುಭಾಶಯ ಕೋರಲಾಗಿದೆ.


ಇದನ್ನೂ ಓದಿ : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ – ಯೋಗ ಗುರು ನಿರಂಜನಾ ಮೂರ್ತಿ ಬಂಧನ!







