ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ – ಮುಡಾ ಮಾಜಿ ಆಯುಕ್ತ ನಟೇಶ್ ವಿರುದ್ದ FIR ದಾಖಲಿಸಲು ಕೋರ್ಟ್ ಆದೇಶ!

ಮೈಸೂರು : ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ, ಹಿಂದೆ ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ವಿರುದ್ಧ FIR ದಾಖಲಿಸಲು  ಕೋರ್ಟ್​ ಆದೇಶಿಸಿದೆ. ಡಿ.ಬಿ.ನಟೇಶ್ ಮುಡಾ ಆಯುಕ್ತರಾಗಿದ್ದ ಅವಧಿಯ ಅಕ್ರಮಗಳ ತನಿಖೆಗೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಮುಖ್ಯ ಕಾರ್ಯದರ್ಶಿ ತಿಳಿಸಿದ್ದರು.

2022ರ ಮಾರ್ಚ್​ನಲ್ಲಿ ಡಿ.ಬಿ ನಟೇಶ್ ಭೇಟಿಯಾಗಲು ಕಚೇರಿಗೆ ಶ್ರೀನಿವಾಸ್ ಹೋಗಿದ್ದರು. ಕಚೇರಿಯಲ್ಲಿ ಡಿ.ಬಿ ನಟೇಶ್ ಹೇಳಿಕೆಯನ್ನು ಮೊಬೈಲ್​ನಲ್ಲಿ ದಾಖಲಿಸಿಕೊಳ್ಳುತ್ತಿದ್ದ  ಸಂದರ್ಭ ಮೊಬೈಲ್​ನ್ನು ಕಚೇರಿಯಿಂದ ಹೊರ ಹಾಕಿದ್ದರು. ಅಲ್ಲದೆ, ಕಚೇರಿಯಲ್ಲಿದ್ದ ಕೆಲವರು ಶ್ರೀನಿವಾಸ್​ನನ್ನು ಎಳೆದಾಡಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು.

ಈ ಸಂಬಂಧ ಮೈಸೂರಿನ 8ನೇ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಶ್ರೀನಿವಾಸ್ ಪಿಸಿಆರ್ ದೂರು ದಾಖಲಿಸಿದ್ದು, ಇದೀಗ ಪಿಸಿಆರ್ ವಿಚಾರಣೆ ನಡೆಸಿದ ನ್ಯಾಯಾಲಯ ಡಿ.ಬಿ ನಟೇಶ್ ವಿರುದ್ದ FIR ದಾಖಲಿಸಿ ತನಿಖೆ ನಡೆಸಲು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಸೂಚನೆ ನೀಡಿದೆ.

ಇದನ್ನೂ ಓದಿ : ಧರ್ಮಸ್ಥಳ ಕೇಸ್​ಗೆ ಬಿಗ್​ ಟ್ವಿಸ್ಟ್.. ಬಂಗ್ಲೆಗುಡ್ಡದಲ್ಲಿ 5 ತಲೆಬುರುಡೆ, 100ಕ್ಕೂ ಹೆಚ್ಚು ಮೂಳೆಗಳು ಪತ್ತೆ!

Btv Kannada
Author: Btv Kannada

Read More