ಬೈಕ್​​​ ನಂಬರ್ ಪ್ಲೇಟ್ ಮೇಲೆ ಅಲ್ಲಲ್ಲಿ ಸ್ಟಿಕ್ಕರ್.. ಟ್ರಾಫಿಕ್ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸೋಕೆ ಹೋದವನ ವಿರುದ್ದ FIR!

ಬೆಂಗಳೂರು : ಟ್ರಾಫಿಕ್ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸೋ ಹೊರಟ ಗಿರಾಕಿಗೆ ಇದೀಗ ಪೊಲೀಸರು ಗಿರಗಿಟ್ಲೆ ಆಡಿಸೋಕೆ ರೆಡಿಯಾಗಿದ್ದಾರೆ. ಹೌದು.. ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳೋಕೆ ಬೈಕ್ ಸವಾರನೋರ್ವ ಮಾಸ್ಟರ್​ ಪ್ಲ್ಯಾನ್ ಮಾಡಿದ್ದು, ನಂಬರ್ ಪ್ಲೇಟ್ ಮೇಲೆ ಅಲ್ಲಲ್ಲಿ ಸ್ಟಿಕ್ಕರ್ ಅಂಟಿಸಿ ಬೆಂಗಳೂರು ಸಿಟಿಯಲ್ಲಿ ಓಡಾಡ್ತಿದ್ದ. ಯಾವ್ದೇ ಸಿಗ್ನಲ್ ಇರ್ಲಿ ವಾಹನದ ಎರಡೋ-ಮೂರೋ ನಂಬರ್ ಮಾತ್ರ ಕಾಣಿಸ್ತಿತ್ತು. ಸಿಸಿಟಿವಿ ನೋಡಿದ ಪೊಲೀಸರಿಗೇ ಯಾರ್ದಪ್ಪಾ ಈ ಬೈಕು ಅನ್ನೋ ಟೆನ್ಷನ್ ಕೂಡ ಶುರುವಾಗಿತ್ತು.

ಕೋಡ್​-ಡಿಕೋಡ್​ ಮಾಡಿದ್ರೂ ಕೂಡ ಸ್ಟಿಕ್ಕರ್ ಅಂಟಿಸಿರೋ ನಂಬರ್ ಪೊಲೀಸ್ರಿಗೆ ತಿಳೀತಿರ್ಲಿಲ್ಲ. ಒನ್ ಫೈನ್ ಡೇ ಸ್ಟಿಕ್ಕರ್ ಅಂಟಿಸಿದ ಆ ಬೈಕು ಕೆ.ಆರ್ ಮಾರ್ಕೆಟ್​ನಲ್ಲಿ ಕಾಣಿಸಿಕೊಂಡಿದೆ. ಟ್ರಾಫಿಕ್ ಪೊಲೀಸಪ್ಪನ ಕಣ್ಣಿಗೆ ಈ ಬೈಕ್ ಕಾಣಿಸಿದ್ದು, ಬೈಕ್​ನ ಹಿಂದೆ ನೋಡಿದ್ರೆ ಸ್ಟಿಕ್ಕರ್​, ಮುಂದೆ ನೋಡಿದ್ರೂ ಸ್ಟಿಕ್ಕರ್​ ಅಂಟಿಸಲಾಗಿತ್ತು.

ತಲೆ ಕೆರೆದುಕೊಂಡ ಪೊಲೀಸಪ್ಪ, ತಕ್ಷಣ ಫೋಟೋ-ವೀಡಿಯೋ ಮಾಡಿಕೊಂಡಿದ್ದಾನೆ. ನಂತರ ಬೈಕ್ ಸವಾರನ ಮೇಲೆ FIR ಕೂಡ ಲಾಡ್ಜ್ ಮಾಡಿದ್ದಾನೆ. ಸದ್ಯ ಕೆ.ಆರ್ ಮಾರ್ಕೆಟ್ ಸಂಚಾರ ಠಾಣೆಯಲ್ಲಿ FIR ದಾಖಲಾಗಿದೆ. ಬೈಕ್​ನ ಮಾಲೀಕನ ಹುಡುಕಾಟದಲ್ಲಿ ಇದೀಗ ಪೊಲೀಸರು ಬ್ಯುಸಿಯಾಗಿದ್ದು, ಸ್ಟಿಕ್ಕರ್ ಇಟ್ಟು ಪೊಲೀಸರಿಗೆ ಟಕ್ಕರ್ ಕೊಡೋಕೆ ಹೋದೋನು ಇದೀಗ ಮಕ್ಕರ್ ಆಗವ್ನೆ.

ಇದನ್ನೂ ಓದಿ : ವಿಜಯಪುರ SBI ಬ್ಯಾಂಕ್​ನಲ್ಲಿ ಭಾರೀ ದರೋಡೆ.. ಸಿಬ್ಬಂದಿಗಳನ್ನು ಕಟ್ಟಿಹಾಕಿ 8 ಕೋಟಿ ಹಣ, ಚಿನ್ನಾಭರಣ ದೋಚಿದ ದುಷ್ಕರ್ಮಿಗಳು!

Btv Kannada
Author: Btv Kannada

Read More