ವೋಟರ್ ಐಡಿ ಕೇಸಲ್ಲಿ ಮುನಿರತ್ನ ನಾಯ್ಡು ವಿರುದ್ಧ ಕಾನೂನು ಕ್ರಮ – MLC ಮುನಿರಾಜ್ ಗೌಡ!

ಬೆಂಗಳೂರು : ಬಿಜೆಪಿ MLC ಮುನಿರಾಜ್ ಗೌಡ ಹಾಗೂ ಇಬ್ಬರು ಆಪ್ತರ ವಿರುದ್ಧ ಆರ್​​.ಆರ್ ನಗರ ಶಾಸಕ ಮುನಿರತ್ನ ನಾಯ್ಡು ದಾಖಲಿಸಿದ್ದ ಸುಳ್ಳು ಪ್ರಕರಣಗಳನ್ನು ಸಿಟಿ ಸಿವಿಲ್ ಕೋರ್ಟ್​ ರದ್ದುಗೊಳಿಸಿದೆ. ಇದೀಗ ಈ ಸಂಬಂಧ MLC ಮುನಿರಾಜ್ ಗೌಡ ಪ್ರತಿಕ್ರಿಯಿಸಿ, ವೋಟರ್ ಐಡಿ ಪ್ರಕರಣದಲ್ಲಿ ನಾವು ಪ್ರತ್ಯಕ್ಷ ಸಾಕ್ಷಿಗಳಾಗಿದ್ದ ಏಕೈಕ ಕಾರಣಕ್ಕೆ ಅಂದಿನ ಶಾಸಕರಾಗಿದ್ದ ಮುನಿರತ್ನ ಹಾಗೂ ಅವರು ಬೆಂಬಲಿಗರು ನಮ್ಮ ಮೇಲೆ ಸುಳ್ಳು ಕೇಸ್​ಗಳನ್ನು ದಾಖಲು ಮಾಡಿ, ಕಳೆದ 8 ವರ್ಷಗಳಿಂದ ನಿರಂತರವಾಗಿ ಕೋರ್ಟ್​ಗೆ ಅಲೆಯುವಂತೆ ಮಾಡಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಬಿಜೆಪಿ MLC ಮುನಿರಾಜ್ ಗೌಡ ಮಾತನಾಡಿ, 2018ರಲ್ಲಿ ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ BJP ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್​ನಿಂದ ಶಾಸಕರಾಗಿರುವ ಮುನಿರತ್ನ ನಾಯ್ಡು ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು. ಆವಾಗ ಜಾಲಹಳ್ಳಿಯ SLV ಪಾರ್ಕ್ ಅಪಾರ್ಟ್​ಮೆಂಟ್​ನಲ್ಲಿ ವೋಟರ್ ಐಡಿ ಪ್ರಕರಣವಾಗಿತ್ತು. ಹಾಗಾಗಿ ಇಡೀ ದೇಶವೇ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೆತ್ರದ ಕಡೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವೋಟರ್ ಐಡಿ ಪ್ರಕರಣದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಕಾರ್ಡ್​ಗಳನ್ನು ಸಂಗ್ರಹ ಮಾಡಿ, ಅದರಲ್ಲಿ ಅವತ್ತು ಚುನಾವಣೆಯನ್ನು ಗೆಲ್ಲಬೇಕೇಂದು ತಂತ್ರಗಾರಿಕೆ ಮಾಡಿದಂತಹ ಮುನಿರತ್ನ ಅವರನ್ನು ಮತ್ತು ಅವರು ತಂಡವನ್ನು ಹಿಡಿದು ಕೊಟ್ಟಂತ ಪರಿಣಾಮವಾಗಿ ನಮ್ಮ ಮತ್ತು ಕಾರ್ಯ ಕರ್ತರ ಮೇಲೆ ಸುಳ್ಳು ಕೇಸ್​ಗಳನ್ನು ದಾಖಲು ಮಾಡಿದ್ದರು ಎಂದರು.

ಪೊಲೀಸ್ ಠಾಣೆಗೆ ಹೋಗಿ ಅವರ ವಿರುದ್ಧ ಸಾಕ್ಷಿ ಹೇಳಬಾರದು ಎಂದು ಯಶವಂತಪುರ ವಾರ್ಡಿನ ಕಾರ್ಪೋರೇಟ್ ಆಗಿದ್ದ ಜಿ.ಕೆ ವೆಂಕಟೇಶ್ ರವರು ಜೆಪಿ ಪಾರ್ಕ್ ವಾರ್ಡ್​ನ ಅಭ್ಯರ್ಥಿ ಆಗಿದ್ದ ಬೋರೇಗೌಡ ಹಾಗೂ ಮುನಿರತ್ನ ನಾಯ್ಡು ಸೋದರ ಸಂಬಂಧಿ ಮಂಜುನಾಥ್ ನಾಯ್ಡು ಅವರು ನನ್ನ ಮೇಲೆ ಮತ್ತು ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲೆ ಮಾಡಿದ್ದರು. ಅದರ ಜೊತೆ ಜಾಲಹಳ್ಳಿ ಕೋದಂಡರಾಮ ಎಂಬುವವರು ಜಾತಿನಿಂದನೆ ಪ್ರಕರಣವನ್ನು ನನ್ನ ಮೇಲೆ ದಾಖಲೆ ಮಾಡಿದ್ದರು.

ನಂತರ ಸುನಂದಾ ಬೋರೇಗೌಡ್ರು ನನ್ನ ಸೀರೆಯ ಸೆರಗನ್ನು ಎಳೆದು, ಹಲ್ಲೆಯನ್ನು ಮಾಡಿದ್ದಾರೆ. ನಮ್ಮ ಮನೆಗೆ ಮುತ್ತಿಗೆಯನ್ನು ಹಾಕಿ, ನನ್ನ ಮನೆಯ ಗ್ಲಾಸ್ ಅನ್ನು ಪುಡಿ ಪುಡಿ ಮಾಡಿದ್ರು ಅಂತ ನನ್ನ ವಿರುದ್ಧ ಸುಳ್ಳು ಕೇಸನ್ನು ಕೊಟ್ಟಿದ್ರು. ಯಶವಂತಪುರ ವಾರ್ಡಿನ ಸದಸ್ಯರಾಗಿದ್ದ ಜಿಕೆ ವೆಂಕಟೇಶ್ ಅವರು ನನ್ನ ಮನೆಗೆ ನುಗ್ಗಿದ್ರು, ನನ್ನ ಕಾಲಿನಿಂದ ಹೊಡ್ದಿದ್ರು ಅಂತ ಹೇಳಿ ನನ್ನ ಮೇಲೆ ಸುಳ್ಳು ಕೇಸನ್ನು ಕೊಟ್ಟಿದ್ರು. ಇದೆಲ್ಲದನ್ನೂ 8 ವರ್ಷಗಳಿಂದ ಹೋರಾಟ ಮಾಡಿ, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟು ಹೋರಾಟ ಮಾಡಿದ್ವಿ ಎಂದು MLC ಮುನಿರಾಜ್ ಗೌಡ ಹೇಳಿದರು.

ನಾನು ಈ ಪ್ರಕರಣದಲ್ಲಿ ಹೊರಗಡೆ ಬರಬೇಕು ಬಿಡುಗಡೆ ಆಗ್ಬೇಕು ಅಂತ ನಮ್ಮ ಉದ್ದೇಶ ಇರಲಿಲ್ಲ. ಆದರೆ ಯಾರು ಕೂಡ ಮುಂದಿನ ದಿನಗಳಲ್ಲಿ ಸುಳ್ಳು ಕೇಸ್​ಗಳನ್ನ ದಾಖಲೆ ಮಾಡಬಾರದು, ಸುಳ್ಳು ಸಾಕ್ಷಿಗಳನ್ನ ಹೇಳಬಾರ್ದು, ಸುಳ್ಳು ಆರೋಪಗಳನ್ನ ಮಾಡ್ಬಾರ್ದು ಎಂಬ ಉದ್ದೇಶವಿತ್ತು. ಯಾರು ಇವನ್ನೆಲ್ಲ ಮಾಡ್ತಾರೆ ಅವರ ವಿರುದ್ಧವಾಗಿ ಹೋರಾಟವನ್ನು ಮಾಡ್ಬೇಕು ಎಂದು ಕಳೆದ 8 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿದ್ವಿ. ಇವತ್ತು ಘನ ನ್ಯಾಯಾಲಯ ನಮಗೆ ನ್ಯಾಯವನ್ನು ಕೊಟ್ಟಿದೆ ಬಿಡುಗಡೆಯು ಸಹ ಆಗಿದ್ದೇವೆ. ಜೊತೆಗೆ ಯಾರು ಈ ಸುಳ್ಳು ಆರೋಪವನ್ನು ಮಾಡಿದ್ದಾರೆ, ಸುಳ್ಳು ಕಂಪ್ಲೇಂಟ್, ದಾಖಲೆ ಮಾಡ್ಕೊಂಡಿದ್ರು. ಅವರ ವಿರುದ್ಧವಾಗಿ ಕಾನೂನು ಕ್ರಮ ಕೈಗೊಳ್ಳಲು ಮುಕ್ತವಾದಂತಹ ಆದೇಶವನ್ನು ನಮಗೆ ನ್ಯಾಯಾಲಯ ಕೊಟ್ಟಿದೆ ಎಂದು MLC ಮುನಿರಾಜ್ ಗೌಡ ಆಗ್ರಹಿಸಿದರು.

ಈ ವೋಟರ್ ಐಡಿ ಪ್ರಕರಣದಲ್ಲಿ ನಾನು ಮುನಿರತ್ನ ನಾಯ್ಡು ಅವರ ಮೇಲೆ Ep 11 ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲೆ ಮಾಡಿ, ಅವರನ್ನ ಅನರ್ಹ ಗೊಳಿಸಬೇಕು ಎಂದು ಕೋರ್ಟ್​ನಲ್ಲಿ ಮನವಿ ಸಲ್ಲಿಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಅದರ ಫಲಿತಾಂಶವು ಬರಲಿದೆ. ಅದಕ್ಕೋಸ್ಕರ ನಮ್ಮ ಕಾರ್ಯಕರ್ತರು ಕಾಯ್ತಿದ್ದೇವೆ ಎಂದರು.

ಇದನ್ನೂ ಓದಿ : ಸಿನಿಮಾ ರೂಪ ತಾಳುತ್ತಿದೆ ಆದಿತ್ಯ ವಿನೋದ್ ಕಾದಂಬರಿ ‘ಕೆಂದಾವರೆ’ – ನಿರ್ದೇಶಕರು ಯಾರು?

Btv Kannada
Author: Btv Kannada

Read More