ಕೊಪ್ಪಳ : ನಮ್ಮ ದೇಶದಲ್ಲಿ ಧರ್ಮದ ವಿಚಾರ ಚರ್ಚೆ ಮಾಡ್ತಾ ಹೋದ್ರೆ ನಾವು ಅಧೋಗತಿಗೆ ಹೋಗ್ತಿವಿ, ನಾವು ಧರ್ಮದ ಬಗ್ಗೆ ಬಿಟ್ಟು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಿದೆ. ಯಾವ ಸರ್ಕಾರದಲ್ಲಿ ಏನಾಗಿದೆ ಅಂತ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಈ ಬಗ್ಗೆ ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಧರ್ಮದ ಚರ್ಚೆ ಮಾಡಲು ಹೋಗಿ ಯುವಕರಿಗೆ ಏನು ಸಂದೇಶ ಕೊಡ್ತೀರಿ. ಬಾನು ಮುಸ್ತಾಕ್ ಬಗ್ಗೆ ಮಾತಾಡ್ತಿರಾ, ಅವರು ಬರೆದಿದ್ದು ಕನ್ನಡ ಕೃತಿ, ಉರ್ದು ಕೃತಿ ಬರೆದಿಲ್ಲ. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೂಕರ್ ಪ್ರಶಸ್ತಿ ಬಂದಿದೆ, ಅದು ಹೆಮ್ಮೆಯ ವಿಷಯ. ದೇವೇಗೌಡ್ರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಅಂದಿದ್ರೂ, ಯಾಕೆ ಬಿಜೆಪಿಯವರು ಕರ್ಕೊಂಡ್ರು? ಎಂದು ಪ್ರಶ್ನಿಸಿದ್ದಾರೆ.

ಸಣ್ಣ ಪುಟ್ಟ ಚರ್ಚೆಗಳ ಅವಶ್ಯಕತೆ ಇಲ್ಲ. ಬಾನು ಮುಸ್ತಾಕ್ ಅವರು ಸಾಧನೆ ಮೆಚ್ಚಿ ಅವರಿಂದ ದಸರಾ ಉದ್ಘಾಟನೆ ಮಾಡುಸ್ತಾಯಿದ್ದೀವಿ. ನಾವೆಲ್ಲ ನಾಲ್ವಡಿ ಕೃಷ್ಣರಾಜರನ್ನ ನೆನೆಸಬೇಕು, ಅವರಿಂದಲೇ ನಾನು ಇವತ್ತು ಈ ಸ್ಥಾನದಲ್ಲಿರೋದು. ಮಿಲ್ಲರ್ ಆಯೋಗ ತಂದು ಬೋವಿ ಸಮುದಾಯವನ್ನು SC ಪಟ್ಟಿಗೆ ಸೇರಿಸಿದ್ದು ಕೃಷ್ಣರಾಜ ಒಡೆಯರ್. ಸಣ್ಣ ಪುಟ್ಟ ತಪ್ಪುಗಳು, ಲೋಪದೋಷಗಳು ಆಗೋದು ಸಹಜ, ಬಿಜೆಪಿಯವರು ಕೋಪವನ್ನ ಹುಡುಕೋದು ಬಿಟ್ಟು ದೊಡ್ಡದನ್ನ ಹುಡುಕೋದು ಕಲಿಯಲಿ. ಪ್ರತಾಪ್ ಸಿಂಹಗೆ ಯೋಗ್ಯತೆ ಇಲ್ಲ, MP ಟಿಕೆಟ್ ಕೊಟ್ಟಿಲ್ಲ. ಟಿಕೆಟ್ ತಪ್ಲಿದೆ ಅಂದ್ರೆ ಯೋಗ್ಯತೆ ಇಲ್ಲ ಅಂತ, ಅದರ ಬಗ್ಗೆ ಯೋಚನೆ ಮಾಡ್ಲಿ ಎಂದು ಚಿವ ಶಿವರಾಜ ತಂಗಡಗಿ ಕಿಡಿ ಕಾರಿದ್ದಾರೆ.
ಇದೇ ವೇಳೆ ಇಂಡಿಯಾ ಪಾಕ್ ಕ್ರಿಕೆಟ್ ಮ್ಯಾಚ್ ಬಗ್ಗೆ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಮಾತಾಡೋಕೆ ಯಾವ ನೈತಿಕತೆ ಇದೆ. ಬಿಜೆಪಿಯವರ ಮಕ್ಕಳನ್ನ ಬೀದಿಗೆ ನಿಲ್ಲಿಸಿ ಹೋರಾಟ ಮಾಡ್ತಿದ್ದಾರಾ ನೋಡಿ. ಬಡವರ ಮಕ್ಳಳು ಹೋರಾಟ ಮಾಡ್ತಿದ್ದಾರೆ, ಸಾಯ್ತಿದ್ದಾರೆ, ಕೊಲೆಗಳಾಗ್ತಿವೆ, ಇವರ ಮಕ್ಕಳು ಎಲ್ಲಿ ಹೋದ್ರು. ಇವರ ಮಕ್ಕಳು ಫಾರಿನ್ ನಲ್ಲಿ ಓದುತ್ತಿದ್ದಾರೆ. ನಾನು ಹೇಳ್ತಿನಿ, ಬಿಜೆಪಿಯವರು ನಿಮ್ಮ ಮಕ್ಕಳ ಜೊತೆ ಪ್ಯಾಮಿಲಿ ಜೊತೆ ಹೋರಾಟಕ್ಕೆ ಬನ್ನಿ. ಹಿಂದುತ್ವಕ್ಕೆ, ಚುನಾವಣೆಗೆ ಮಾತ್ರ ಮ್ಯಾಚ್ ಇಟ್ಕೊಂಡಿದ್ದಾರೆ. ಕೇಂದ್ರ ಸರ್ಕಾರ ಅದನ್ನ ಬಂದ್ ಮಾಡಬೇಕಿತ್ತು, ಬಿಸಿಸಿಐ ಅದ್ಯಕ್ಷ ಯಾರು? ಅಮಿತ್ ಶಾ ಮಗ.. ಯಾಕೆ ಪಾಕಿಸ್ತಾನದ ಜೊತೆ ಆಡೋಕೆ ಬಿಟ್ರಿ, ಬಿರಿಯಾನಿ ತಿಂದು ಬಂದಿದ್ದು ಯಾರು. ಬೇರೆ ದೇಶಗಳಲ್ಲಿ ಎಲ್ಲೂ ಧರ್ಮದ ಬಗ್ಗೆ ಚರ್ಚೆ ಆಗಲ್ಲ, ಅಭಿವೃದ್ಧಿ ಬಗ್ಗೆ ಚರ್ಚೆ ಆಗುತ್ತೆ. ದುಬೈ ಮರುಭೂಮಿಯಲ್ಲಿ ಬಂಗಾರ ಹೋಗೆ ಆಡ್ತಾಯಿದೆ, ಧರ್ಮದ ಬಗ್ಗೆ ಚರ್ಚೆ ಆಗಿಯೇ ಪಾಕಿಸ್ತಾನದ ಪರಿಸ್ಥಿತಿ ಎಲ್ಲಿಗೆ ಬಂದಿದೆ, ಬಾಂಗ್ಲಾದೇಶದ ಪರಿಸ್ಥಿತಿ ಎಲ್ಲಿಗಿದೆ ಎಂದು ಗುಡುಗಿದ್ದಾರೆ.
ಕ್ರಿಶ್ಚಿಯನ್ ಮತಾಂತರದ ಜಾತಿ ಲಿಸ್ಟ್ ಸಂಬಂಧ ಪ್ರತಿಕ್ರಿಯಿಸಿ, ಸೋನಿಯಾ ಗಾಂಧಿಯವರು ಇಂತಹ ಸಣ್ಣತನ ಮಾಡೋಕೆ ಹೋಗಲ್ಲ, ಸಣ್ಣತನದ ಅವಶ್ಯಕತೆ ಸೋನಿಯಾಗಾಂಧಿ ಅವರಿಗೆ ಇಲ್ಲ. ಸಣ್ಣತನದ ಯೋಚನೆ ಮಾಡಿದ್ರೆ ಇಷ್ಟೊತ್ತಿಗೆ ಈ ದೇಶದ ಪ್ರಧಾನಿ ಆಗ್ತಾಯಿದ್ರು. ಖರ್ಚು ಮಾಡಿ ಸರ್ವೆ ಮಾಡ್ತಿರೋವಾಗ ಪ್ರತಿಯೊಂದು ಡಾಟಾ ಬೇಕು, ಮತಾಂತರ ಆಗೋಕೆ ಕಾನೂನಿನಲ್ಲಿ ಅವಕಾಶ ಇದೆ, ಅವರು ಒಪ್ಕೊಂಡು ಹೋಗಬಹುದು. ಬಿಜೆಪಿಯವರು ಹೇಳಿದ ರೀತಿ ಸರ್ವೆ ಮಾಡಬೇಕಾ? ಒತ್ತಾಯದ ಮತಾಂತರ ಮಾಡಿದ್ರೆ ನಮ್ಮದೂ ವಿರೋಧ ಇದೆ. ಕಾನೂನು ರೀತಿ ಮತಾಂತರ ಆದ್ರೆ ಯಾರು ಏನು ಮಾಡೋಕೆ ಆಗಲ್ಲ, ಈ ದೇಶದಲ್ಲಿ ಪ್ರಜಾಪ್ರಭುತ್ವ ಇದೆ, ಎಲ್ಲರೂ ಸರ್ವ ಸ್ವತಂತ್ರರು. ಸಮೀಕ್ಷೆಯಲ್ಲಿ ಜನರು ಏನು ಬರೆಸೋದೆ ಇದೆ ಅದನ್ನ ಬರೆಸಲಿ. ಯಾರ್ಯಾರು ಏನೇನು ಬರಸ್ತಾರೆ, ವರದಿ ಬರಲಿ ನಂತರ ಪೂರ್ಣ ಮಾಹಿತಿ ಹೇಳ್ತಿನಿ ಎಂದಿದ್ದಾರೆ.
ಇನ್ನು ಬಿಜೆಪಿಯವರು ಮೋದಿಯವರನ್ನ ಓಲೈಸಲು ಮಾತಾಡ್ತಾಯಿದ್ದಾರೆ. ಮೋದಿಯವರಿಗೆ ನಾನು ಹಿಂದೂತ್ವ ಅಂತ ಗೊತ್ತಾಗಲಿ. ದೊಡ್ಡ ಪದವಿ ಕೊಡ್ಲಿ ಅಂತ ಚಲವಾದಿ ನಾರಾಯಣಸ್ವಾಮಿ ಓಲೈಸುವ ಸಲುವಾಗಿ ಮಾತಾಡ್ತಾಯಿದ್ದಾನೆ. 60 ಪ್ರಶ್ನೆ ಕೇಳ್ತಾರೆ, ಅವರು ಏನು ಹೇಳ್ತಾರೊ ಅದನ್ನ ಬರೆದುಕೊಂಡು ಬರೋಕೆ ಹೇಳಿದಿವಿ, ನಾವು ಯಾವುದೇ ಜಾತಿ ಗಣತಿಯನ್ನ ಮಾಡ್ತಾಯಿಲ್ಲ, ಪೂರ್ಣ ಪ್ರಮಾಣದ ತುಳಿತಕ್ಕೊಳಗಾದವರ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆ ತಲುಪಿಸುವ ವಿಚಾರ ಇಟ್ಕೊಂಡು ಸರ್ವೆ ಮಾಡಲಾಗ್ತಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಇದನ್ನೂ ಓದಿ : ಕುರುಬ, ಕೋಲಿ ಸಮುದಾಯನ ST ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡ್ತೇವೆ – ಸಚಿವ ಪ್ರಿಯಾಂಕ್ ಖರ್ಗೆ!







