ಕುರುಬ, ಕೋಲಿ ಸಮುದಾಯನ ST ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡ್ತೇವೆ – ಸಚಿವ ಪ್ರಿಯಾಂಕ್ ಖರ್ಗೆ!

ಕಲಬುರಗಿ : ರಾಜ್ಯದ ಕುರುಬ ಸಮುದಾಯವನ್ನು ST ಪಟ್ಟಿಗೆ ಸೇರಿಸುವ ಬಗ್ಗೆ ನಾಳೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಬೆಂಗಳೂರಿನಲ್ಲಿ ಸಭೆ ಕರೆದಿದೆ. ಸದ್ಯ ಕುರುಬ ಸಮುದಾಯವು 2ಎ ಕೆಟಗರಿಯಲ್ಲಿದ್ದು, ಇದನ್ನು ST ಪಟ್ಟಿಗೆ ಸೇರಿಸುವ ಬಗ್ಗೆ ನಾಳೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಸಂಬಂಧ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಕುರುಬ, ಕೋಲಿ ಸಮುದಾಯನ ST ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡ್ತೇವೆ ಎಂದಿದ್ದಾರೆ.

ಈ ಬಗ್ಗೆ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ST ಸೇರ್ಪಡೆ ಮಾಡುವಂತೆ ಕುರುಬ ಸಮುದಾಯದಿಂದ ಹಲವಾರು ವರ್ಷದಿಂದ ಬೇಡಿಕೆ ಇತ್ತು. ಈ ಬಗ್ಗೆ ನಾವು ದಾಖಲೆ ಕೇಳಿದ್ದೆವು, ನಾಳೆ ಕುರುಬ ಸಮುದಾಯದ ಬಗ್ಗೆ ಸಭೆ ಕರೆದಿದ್ದಾರೆ, ಅದಾದ ಮೇಲೆ ಕೋಲಿ ಸಮುದಾಯದ ಬಗ್ಗೆ ಸಭೆ ಕೂಡಾ ಮಾಡುತ್ತೇವೆ. ಕುರುಬ ಮತ್ತು ಕೋಲಿ ಸಮುದಾಯವನ್ನು STಗೆ ಸೇರಿಸಿ ಅಂತ ಬೇಡಿಕೆ ಇತ್ತು, ಹೀಗಾಗಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸುತ್ತಿದ್ದೇವೆ. 19 ಮತ್ತು 20 ರೊಳಗೆ ಎರಡೂ ಸಮುದಾಯದ ಮುಖಂಡರ ಸಭೆ ಕರೆಯುತ್ತೇವೆ. ಎಲ್ಲಾ ಸಭೆ ಮುಗಿದ ಬಳಿಕ ಕುರುಬ ಮತ್ತು ಕೋಲಿ ಸಮುದಾಯನ ST ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡ್ತೇವೆ, ಇದರಲ್ಲಿ ಯಾವುದೇ ರಾಜಕೀಯ ಮಾಡೋಕೆ ಹೋಗಲ್ಲ ಎಂದರು.

ಈ ಹಿಂದೆ ಬಿಜೆಪಿ ರಕ್ತದಲ್ಲಿ ಬರೆದುಕೊಡುತ್ತೇನೆಂದು ಹೇಳಿತ್ತು, ಕಲಬುರಗಿಗೆ ಬಂದು ಖುದ್ದು ಪ್ರಧಾನಿ ಹೇಳಿದ್ದರು. ಆದ್ರೆ ಇಲ್ಲಿಯವರೆಗೆ ಏನಾಯ್ತು? ಕೋಲಿ ಸಮುದಾಯ STಗೆ ಸೇರ್ಪಡೆ ಆಗಿಲ್ಲ. ಹೀಗಾಗಿ ಈ ಬಾರಿ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತೆ. ಭಾರತ ಸರ್ಕಾರ ಏನೆಲ್ಲಾ ದಾಖಲಾತಿ ಕೇಳಿದೆ
ಅದನ್ನೆಲ್ಲವನ್ನು ನಾವು ಈ ಬಾರಿ ಕೊಡ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆಯಿಟ್ಟ ಐಫೋನ್ 17 ಸರಣಿಗೆ ಭರ್ಜರಿ ರೆಸ್ಪಾನ್ಸ್ – ಬೆಲೆ ಎಷ್ಟು, ಏನೆಲ್ಲಾ ಫೀಚರ್ಸ್​ ಇದೆ ಗೊತ್ತಾ?

Btv Kannada
Author: Btv Kannada

Read More