ಕನ್ನಡ ಚಿತ್ರರಂಗದ ಖ್ಯಾತ ನಟ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಆಗಿದೆ. ಈ ಬಗ್ಗೆ ಉಪೇಂದ್ರ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದು, ತಮ್ಮ ಹೆಸರು ಹೇಳಿಕೊಂಡು ಯಾರಾದರೂ ದುಡ್ಡು ಕೇಳಿದ್ರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿರೋ ಕಿಡಿಗೇಡಿಗಳು, ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಾಂಟಾಕ್ಟ್ ಲಿಸ್ಟ್ನಲ್ಲಿರುವ ಎಲ್ಲರಿಗೂ ಹಣ ನೀಡುವಂತೆ ಮೆಸೇಜ್ ಮಾಡಲಾಗಿದ್ದು, ಎಮರ್ಜೆನ್ಸಿ ಇದೆ, ಹಣ ನೀಡಿ ಎಂದು ಮೆಸೇಜ್ ಹೋಗಿದೆ.

ಸ್ನೇಹಿತರು ಮೆಸೇಜ್ ನೋಡಿ ಲಕ್ಷಾಂತರ ರೂಪಾಯಿವರೆಗೂ ಹಣ ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ಪುತ್ರನಿಂದಲೂ ಯುಪಿಐ ಮೂಲಕ 55 ಸಾವಿರ ಕಳುಹಿಸಲಾಗಿದೆ. ಈಗ ಉಪೇಂದ್ರ ದಂಪತಿ ಸದ್ಯ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೈಬರ್ ಕ್ರೈಮ್ಗೂ ದೂರು ನೀಡಿದ್ದಾರೆ.

ಹ್ಯಾಕ್ ಆಗೆದ್ದೇಗೆ? ಆನ್ಲೈನ್ನಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ವಸ್ತುವೊಂದನ್ನು ಆರ್ಡರ್ ಮಾಡಿದ್ದರು. ಹೀಗಾಗಿ ಪ್ರಿಯಾಂಕ ಉಪೇಂದ್ರ ಮೊಬೈಲ್ಗೆ ಹ್ಯಾಕರ್ ಲಿಂಕ್ ಒಂದನ್ನು ಕಳಿಸಿ ಆರ್ಡರ್ ಡೆಲಿವರಿ ಮಾಡಲು ಈ ನಂಬರ್ಗೆ ಕರೆಮಾಡಿ ಎಂದಿದ್ದ. ಲಿಂಕ್ ಓಪನ್ ಮಾಡ್ತಿದ್ದಂತೆ ಪ್ರಿಯಾಂಕಾ ಮೊಬೈಲ್ ಏಕಾಏಕಿ ಹ್ಯಾಕ್ ಆಗಿದೆ. ಕರೆ ಮಾಡಿದಾಗ ಕನೆಕ್ಟ್ ಆಗದೇ ಇದ್ದಾಗ ಪ್ರಿಯಾಂಕ ಅವರು ನಟ ಉಪೇಂದ್ರ ಮೊಬೈಲ್ನಿಂದ ಕರೆ ಮಾಡಿದ್ದರು. ಹೀಗಾಗಿ ಇಬ್ಬರ ಮೊಬೈಲ್ನ್ನು ಹ್ಯಾಕರ್ ಹ್ಯಾಕ್ ಮಾಡಿದ್ದಾನೆ.
ಇದನ್ನೂ ಓದಿ : ದಸರಾ ಉದ್ಘಾಟನೆ ವಿವಾದ.. ಬಾನು ಮುಷ್ತಾಕ್ ಆಹ್ವಾನ ಪ್ರಶ್ನಿಸಿ ಸಲ್ಲಿಸಿದ್ದ 3 ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್!







