ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಯುವತಿಯ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದ ಆಸಾಮಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 7ರಂದು ಜಕ್ಕೂರು ಮುಖ್ಯರಸ್ತೆಯಲ್ಲಿ ರಾತ್ರಿ 11.50ಕ್ಕೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಗಿದ್ದೇನು? ಜಕ್ಕೂರು ಮುಖ್ಯರಸ್ತೆಯಲ್ಲಿ ಶ್ವಾನವೊಂದು ಅಪಘಾತಕ್ಕೆ ಒಳಗಾಗಿತ್ತು. ಇದನ್ನು ಗಮನಿಸಿದ ಯುವತಿ, ಕಾರು ನಿಲ್ಲಿಸಿ ಅದರ ರಕ್ಷಣೆಗೆ ಮುಂದಾಗಿದ್ದಳು. ಆ ಬಳಿಕ ಕೈಗೆ ರಕ್ತ ಆಗಿದ್ದರಿಂದ ಪೆಟ್ರೊಲ್ ಬಂಕ್ ಬಳಿ ಕೈತೊಳೆದು ಹೊರ ಬರುತ್ತಿದ್ದಂತೆ ಬೈಕ್ನಲ್ಲಿ ಬಂದ ಆಸಾಮಿ ಬ್ಯಾಡ್ ಟಚ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ವಲ್ಪ ಹೊತ್ತಿನ ಬಳಿಕ ಎರಡನೇ ಬಾರಿಗೆ ಬಂದು ಯುವತಿ ಖಾಸಗಿ ಅಂಗ ಮುಟ್ಟಿ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಸದ್ಯ ಆರೋಪಿ ಮಂಜುನಾಥ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.



ಇದನ್ನೂ ಓದಿ : ವರನಟ ಡಾ. ರಾಜ್ಕುಮಾರ್ ಬಗ್ಗೆ ಅವಹೇಳನ – CCB ಪೊಲೀಸರಿಂದ ಆರೋಪಿ ಅರೆಸ್ಟ್!







