ಬೆಂಗಳೂರು : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ಕಳ್ಳತನವಾಗಿದೆ. ಹೊಸಕೆರೆಹಳ್ಳಿಯ ಪ್ಲಾಟ್ನಲ್ಲಿ ಮೂರು ಲಕ್ಷ ಹಣ ಕಳ್ಳತನದ ಬಗ್ಗೆ ಮ್ಯಾನೇಜರ್ ನಾಗರಾಜ್ ಮೂಲಕ ಸಿಕೆ ಅಚ್ಚುಕಟ್ಟು ಠಾಣೆಗೆ ದೂರು ನೀಡಲಾಗಿದೆ.
ಸೆ.4ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೈಸೂರಿಗೆ ತೆರಳಿದ್ದರು. ಈ ವೇಳೆ ಮನೆಯ ವ್ಯಾಡ್ರೂಬ್ ಬಾಕ್ಸ್ನಲ್ಲಿದ್ದ ಹಣ ತೆಗೆದುಕೊಡಲು ಮ್ಯಾನೇಜರ್ಗೆ ವಿಜಯಲಕ್ಷ್ಮಿ ಹೇಳಿದ್ದರು. ಅದರಂತೆ ಸ್ವಲ ಹಣ ತೆಗೆದು ಕೊಟ್ಟು ಉಳಿದ ಹಣವನ್ನು ಮ್ಯಾನೇಜರ್ ನಾಗರಾಜ್ ಅಲ್ಲೇ ಇಟ್ಟಿದ್ದರು. ಅದೇ ದಿನ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೈಸೂರಿಗೆ ತೆರಳಿದ್ದರು. ಮನೆಯ ಬೀಗ ತಾಯಿಗೆ ಕೊಟ್ಟು ಕೆಲಸದ ಮೇಲೆ ಹೊರಗೆ ಮ್ಯಾನೇಜರ್ ನಾಗರಾಜ್ ಕೂಡ ಹೊರ ಹೋಗಿದ್ದರು.

ಆ ಬಳಿಕ ಸೆ.7ರಂದು ವಿಜಯಲಕ್ಷ್ಮಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಸೆ.8ರಂದು ವ್ಯಾಡ್ರೂಬ್ನಲ್ಲಿ ಹಣ ನೋಡಿದಾಗ ಳ್ಳತನವಾಗಿರುವುದು ಪತ್ತೆಯಾಗಿದೆ. ಕೂಡಲೇ ಮನೆಯ ಎಲ್ಲಾ ಕಡೆ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಹುಡುಕಾಟ ನಡೆಸಿದ್ದಾರೆ. ಬಳಿಕ ಮನೆಯ ಕೆಲಸದವರನ್ನು ವಿಚಾರಿಸಿದಾಗ ಅವರು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಮನೆಯ ಕೆಲಸದವರ ಮೇಲೆ ಅನುಮಾನಿಸಿ ಮ್ಯಾನೇಜರ್ ನಾಗರಾಜ್ ದೂರು ದಾಖಲಿಸಿದ್ದಾರೆ ದೂರಿನನ್ವಯ ಸಿ.ಕೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.



ಇದನ್ನೂ ಓದಿ : ಟೀ ಚೆನ್ನಾಗಿಲ್ಲ ಅಂದಿದಕ್ಕೆ BMTC ಚಾಲಕನ ಮೇಲೆ ಹಲ್ಲೆ.. ಆರೋಪಿ ಅರೆಸ್ಟ್!







