ಮಂಡ್ಯ : ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಖಂಡಿಸಿ ಹಿಂದೂ ಕಾರ್ತಕರ್ತರು ನಡೆಸಿದ್ದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಆಗ ಲಾಠಿ ಏಟು ತಿಂದಿದ್ದ ಮಹಿಳೆ ವಿರುದ್ಧ FIR ದಾಖಲಾಗಿದೆ.
ಸಿಎಂ ಹಾಗೂ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟ ಹಿನ್ನೆಲೆ ಶಿವಪುರ ನಿವಾಸಿ ಜ್ಯೋತಿ ಅವರ ವಿರುದ್ಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದ್ದೂರು ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ಅನ್ಯಧರ್ಮದ ವಿಚಾರವಾಗಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಪರಸ್ಪರ ಕೋಮುಗಳ ನಡುವೆ ವೈಮನಸ್ಸು, ವೈರತ್ವಕ್ಕೆ ಉತ್ತೇಜನ ನೀಡುವ ಆರೋಪದಲ್ಲಿ FIR ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸಿಎಂ ವಿರೋಧ!
Author: Btv Kannada
Post Views: 402







