ಬೆಂಗಳೂರಲ್ಲಿ ಹೆಚ್ಚಾದ ರಾಬರ್ಸ್ ಹಾವಳಿ.. ನಿವೃತ್ತ ACP ಮೇಲೆಯೇ ಹಲ್ಲೆ ನಡೆಸಿ 8 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು!

ಬೆಂಗಳೂರು : ಸಿಲಿಕಾನ್​​ ಸಿಟಿಯಲ್ಲಿ ರೋಡ್ ರಾಬರ್ಸ್​ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹೆಬ್ಬಾಳದ ವೆಟರ್ನರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಘಟನೆಯಲ್ಲಿ, ನಿವೃತ್ತ ಎಸಿಪಿ ಎಚ್. ಸುಬ್ಬಣ್ಣ ಅವರ ಮೇಲೆ ಇಬ್ಬರು ರಾಬರ್ಸ್​ಗಳು ಚಾಕುವಿನಿಂದ ಹಲ್ಲೆ ನಡೆಸಿ, ಚಿನ್ನದ ಸರ ಮತ್ತು ಬ್ರಾಸ್ ಲೇಟ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಸಂಜಯ್ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಿವೃತ್ತ ಎಸಿಪಿ ಎಚ್. ಸುಬ್ಬಣ್ಣರವರ ಮೇಲೆ ಹಲ್ಲೆ ಮಾಡಿ ಆಗಂತುಕರು ಸುಮಾರು 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಸಿದು ಎಸ್ಕೇಪ್​ ಆಗಿದ್ದರು. ಎಚ್.ಸುಬ್ಬಣ್ಣ ಅವರು ಎಂದಿನಂತೆ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದಾಗ ಹೆಬ್ಬಾಳದ ವೆಟರ್ನರಿ ಆಸ್ಪತ್ರೆಯ ಆವರಣದಲ್ಲಿ ಸುಮಾರು 9:30ರ ಸಮಯದಲ್ಲಿ ಇಬ್ಬರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ ಬಂದ ಆಗಂತುಕರು ಅವರ ಮೇಲೆ ದಾಳಿ ನಡೆಸಿ ಚಾಕುವಿನಿಂದ ಹಲ್ಲೆ ಮಾಡಿ, ಕೈಯಲ್ಲಿದ್ದ ಚಿನ್ನದ ಸರ ಮತ್ತು ಬ್ರಾಸ್​ ಲೇಟ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಆ ಕೂಡಲೇ ಗಾಯಗೊಂಡಿದ್ದ ಸುಬ್ಬಣ್ಣ ಅವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನೂ ಘಟನೆಯಲ್ಲಿ ಆರೋಪಿಗಳು ಸುಬ್ಬಣ್ಣ ಅವರನ್ನು ಗುರುತಿಸಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು CCTV ಫೂಟೇಜ್ ಮತ್ತು ಸಾಕ್ಷ್ಯ ಸಂಗ್ರಹಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ನಿವೃತ್ತ ಎಸಿಪಿ ಎಚ್. ಸುಬ್ಬಣ್ಣ ಅವರು ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಘಟನೆಯು ಪೊಲೀಸ್ ಅಧಿಕಾರಿಗಳ ಸುರಕ್ಷತೆಯ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ.

ಇದನ್ನೂ ಓದಿ : ಶಾಸಕ ಪ್ರಭು ಚೌಹಾಣ್​ಗೆ ಸೈಬರ್ ವಂಚಕರ ದಾಳಿ – ವಾಟ್ಸಾಪ್​ಗೆ ಅಶ್ಲೀಲ ಫೋಟೋ ಕಳುಹಿಸಿ ಹಣಕ್ಕೆ ಡಿಮ್ಯಾಂಡ್.. FIR ದಾಖಲು!

Btv Kannada
Author: Btv Kannada

Read More