ಬೀದರ್ : ಔರಾದ್ ಹಾಲಿ ಶಾಸಕ ಪ್ರಭು ಚೌಹಾಣ್ ವಾಟ್ಸಾಪ್ಗೆ ಅಶ್ಲೀಲ ಫೋಟೋ ಕಳುಹಿಸಿ ಸೈಬರ್ ವಂಚಕನೋರ್ವ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಸಂಬಂಧ ಶಾಸಕ ಪ್ರಭು ಚೌಹಾಣ್ ಸಂಬಂಧಿ ಮುರುಳಿಧರ್ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದೆ.

ಶಾಸಕ ಪ್ರಭು ಚೌಹಾಣ್ ವಾಟ್ಸಾಪ್ಗೆ ಯುವತಿಗೆ ಚುಂಬಿಸುವ ಅಶ್ಲೀಲ ಎಡಿಟೆಡ್ ಫೋಟೋ ಕಳುಹಿಸಿ 30 ಸಾವಿರ ಹಣಕ್ಕೆ ಸೈಬರ್ ವಂಚಕ ಬೇಡಿಕೆ ಇಟ್ಟಿದ್ದಾನೆ. ಹಣ ಹಾಕದಿದ್ದರೆ ವಿಡಿಯೋ ಶೇರ್ ಮಾಡುತ್ತೇನೆಂದು ಎಂದು ಬೆದರಿಕೆ ಖದೀಮ, ʼನನಗೆ 30 ಸಾವಿರ ಹಣ ಹಾಕಿ ಸಾಹೇಬ್ರೆ, ನನ್ನ ಮೇಲೆ ಭರವಸೆ ಇಟ್ಟು ಸಹಾಯ ಮಾಡಿ, ಹಣ ಹಾಕದಿದ್ದರೆ ಯೂಟ್ಯೂಬ್‌ನಲ್ಲಿ ವಿಡಿಯೋ ಶೇರ್ ಮಾಡುವೆ ಎಂದು ಬೆದರಸಿದ್ದ.

ಈ ಕುರಿತು ಶಾಸಕ ಪ್ರಭು ಚೌಹಾಣ್ ಸಂಬಂಧಿ ಮುರುಳಿಧರ ನೀಡಿದ ದೂರಿನ ಮೇರೆಗೆ ಹೊಕ್ರಣಾ ಪೊಲೀಸ್ ಠಾಣೆಯಲ್ಲಿ ಸೆ.8ರಂದು ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿ ವಿರುದ್ಧ BNS 308 & 66(D) ಐಟಿ ಎಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಹೊಕ್ರಣಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.


ಇದನ್ನೂ ಓದಿ : ರಮೇಶ್ ಅರವಿಂದ್ ಅಭಿನಯದ ಹಾರಾರ್ ಜಾನರ್ ‘ದೈಜಿ’ ಚಿತ್ರದ ಟೀಸರ್ ಬಿಡುಗಡೆ!







