ಮಂಡ್ಯ : ಮದ್ದೂರು ಪಟ್ಟಣದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಹಿನ್ನಲೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ದ FIR ದಾಖಲಾಗಿದೆ.

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಬಳಿಕ ಬುಧವಾರ (ಸೆ.10) ಬಿಜೆಪಿ-ಜೆಡಿಎಸ್ನಿಂದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಸಿ.ಟಿ.ರವಿ ಭಾಷಣ ಮಾಡಿದ್ದರು. ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ ಆರೋಪ ಸಂಬಂಧ ಮದ್ದೂರು ಪೊಲೀಸರು MLC ಸಿ.ಟಿ ರವಿ ವಿರುದ್ದ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

MLC ಸಿ.ಟಿ ರವಿ ಅವರು ಮುಸ್ಲಿಂರ ವಿರುದ್ದ ಮಾತನಾಡಿ ಕೋಮು ಸೌಹಾರ್ದತೆಗೆ ಭಂಗ ತಂದಿರುವ ಆರೋಪ ಕೇಳಿಬಂದಿದ್ದು, ಅನ್ಯ ಸಮುದಾಯಗಳ ಮಧ್ಯೆ ದ್ವೇಷ ಉಂಟುಮಾಡುವ ಮತ್ತು ಸೌಹಾರ್ದತಾ ಭಾವನೆಗಳಿಗೆ ಭಾದಕವಾಗುವಂತೆ, ವೈರತ್ವ, ದ್ವೇಷ ಉಂಟಾಗುವಂತೆ ಭಾಷಣ ಮಾಡಿ ಹಿನ್ನೆಲೆ BNSS ಕಾಯ್ದೆ 176ರ ಅಡಿ MLC ಸಿ.ಟಿ ರವಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.




ಇದನ್ನೂ ಓದಿ : ‘ಸುಳಿ’ ಟ್ರೇಲರ್ & ಆಡಿಯೋ ಬಿಡುಗಡೆ.. ತಮಿಳಿನ ಜನಪ್ರಿಯ ‘ಪವಳಾಯಿ’ ಕಾದಂಬರಿಗೆ ಕನ್ನಡದಲ್ಲಿ ಚಿತ್ರರೂಪ!







