ಬೆಂಗಳೂರು : ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವೆಡೆ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರಲ್ಲಿ ನಗರದಲ್ಲಿ ಕಳೆದ ರಾತ್ರಿ ಭರ್ಜರಿ ಮಳೆಯಾಗಿದ್ದು, ಇಡೀ ನಗರ ಅಸ್ತವ್ಯಸ್ತಗೊಂಡಿದೆ. ಬೆಳ್ಳಂಬೆಳಗ್ಗೆ ಕೆಲಸಕ್ಕೆ ಅಂತಾ ಹೊರಟವರಿಗೆ ಶಾಕ್ ಆಗಿದೆ.

ಶಾಂತಿನಗರ, ಲಾಲ್ ಬಾಗ್, ವಿಲ್ಸನ್ ಗಾರ್ಡನ್, ಜಯನಗರ, ಎಂ.ಜಿ ರೋಡ್, ಟ್ರಿನಿಟಿ ಸರ್ಕಲ್, ಆಶ್ರಮ, ಶ್ರೀನಿವಾಸನಗರ, ಹನುಮಂತನಗರ, ಕತ್ರಿಗುಪ್ಪೆ, ವಿದ್ಯಾಪೀಠ, ಮೆಜೆಸ್ಟಿಕ್, ಯಶವಂತಪುರ ಸೇರಿ ಹಲವೆಡೆ ಭಾರೀ ಮಳೆಯಾಗಿದೆ.

ಇನ್ನು ರಾಜಾಜಿನಗರ 4ನೇ ಬ್ಲಾಕ್ನಲ್ಲಿ ಬಹೃತ್ ಮರವೊಂದು ಧರೆಗುರುಳಿದೆ. ಪರಿಣಾಮ ಐದು ಕಾರು, ಟಾಟಾ ಏಸ್, ಮೂರ್ನಾಲ್ಕು ಬೈಕ್ ಹಾಗೂ ಎರಡು ಮನೆಯ ಕಾಂಪೌಂಡ್ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಎರಡು ಕುಟುಂಬಳಿಗೆ ದಿಗ್ಬಂಧನ ಹಾಕಿಂದಂತೆ ಆಗಿದೆ.

ಮನೆಯ ಕಾಂಪೌಂಡ್ ಮೇಲೆ ಮರಬಿದ್ದ ಪರಿಣಾಮ ಎಲ್ಲಿಯೂ ಬರಲು ಅವಕಾಶ ಇರಲಿಲ್ಲ. ಚಂದ್ರಮ್ಮ ಹಾಗೂ ಪೀಟರ್ ಎಂಬುವವರ ಮನೆ ಮೇಲೆ ಮರ ಬಿದ್ದಿದೆ. ಹಾಗೆಯೇ ಪೀಟರ್ ಮನೆಗೆ ಚೆನ್ನೈನಿಂದ ನೆಂಟರು ಬಂದಿದ್ದರು. ಮನೆ ಮುಂದೆ ನಿಲ್ಲಿಸಿದ್ದ ನೆಂಟರ ಕಾರು ಫುಲ್ ಜಖಂಗೊಂಡಿದೆ.

ಮರ ಬಿದ್ದು ಹೊರಬರಲಾಗದೇ ಹೌಸ್ ಅರೆಸ್ಟ್ ಆಗಿದ್ದೀವಿ ಎಂದು ಕುಟುಂಬ ಗೋಳಾಡಿದೆ. ಮತ್ತೊಂದು ಕಡೆ ಆತಂಕದ ವಿಚಾರ ಅಂದ್ರೆ, ವಿದ್ಯುತ್ ಕಂಬಗಳು ವಾಲಿದೆ. ಯಾವುದೇ ಕ್ಷಣದಲ್ಲಾದರೂ ಅದು ಕೂಡ ಅಪಾಯ ತರುವ ಸೂಚನೆ ನೀಡ್ತಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಕೂಡ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಬಾರದೇ ನಿರ್ಲಕ್ಷಿಸಿದ್ದಾರೆ. ವಿದ್ಯತ್ ಕಂಬ ಕೂಡ ಬಾಗಿದ್ದು, ಬೆಸ್ಕಾಂ ಸಿಬ್ಬಂದಿ ಕರೆಂಟ್ ಸಂಪರ್ಕವನ್ನು ಕೂಡ ಕಡಿತಗೊಳಿಸಿಲ್ಲ.
ಇದನ್ನೂ ಓದಿ : ‘ವಾಯುಪುತ್ರ’ ಆನಿಮೇಷನ್ ಸಿನಿಮಾ ಅನೌನ್ಸ್.. ದಸರಾಗೆ ಪಂಚ ಭಾಷೆಯಲ್ಲಿ ರಿಲೀಸ್!







