‘ವಾಯುಪುತ್ರ’ ಆನಿಮೇಷನ್‌ ಸಿನಿಮಾ ಅನೌನ್ಸ್.. ದಸರಾಗೆ ಪಂಚ ಭಾಷೆಯಲ್ಲಿ ರಿಲೀಸ್!

ಭಾರತೀಯ ಚಿತ್ರರಂಗದಲ್ಲಿ ವಾಯುಪುತ್ರ ಅಥವಾ ಹನುಮಾನ್ ಹೆಸರಿನಲ್ಲಿ ಸಾಹಸ ಕಥೆಗಳು ಸಿನಿಮಾ ಆಗಿವೆ. ಆ ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದೀಗ ವಾಯುಪುತ್ರ ಟೈಟಲ್ ನಡಿ ಆನಿಮೇಷನ್‌ ರೂಪದಲ್ಲಿ ಸಿನಿಮಾವೊಂದು ಬೆಳ್ಳಿತೆರೆಗೆ ಬರೋದಿಕ್ಕೆ ಸಜ್ಜಾಗಿದೆ.

ಸಿತಾರಾ ಎಂಟರ್ಟೈನ್ಮೆಂಟ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ನಡಿ ನಾಗವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಿಸಿರುವ ವಾಯುಪುತ್ರ ಸಿನಿಮಾ ದಸರಾಗೆ ಬಿಡುಗಡೆಯಾಗುತ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ 3ಡಿ ಅನಿಮೇಷನ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಕಾರ್ತಿಕೇಯ, ಕಾರ್ತಿಕೇಯ-2 ಹಾಗೂ ತಂಡೇಲ್ ಸಿನಿಮಾಗಳನ್ನು ನಿರ್ದೇಶಿಸಿರುವ ಚಂದೂ‌ ಮೊಂಡೆಟಿ ಸೂಪರ್ ಹೀರೋ ವಾಯುಪುತ್ರ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದಾರೆ. ಶ್ರೀಕರ ಸ್ಟುಡಿಯೋಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಸದ್ಯ ಚಿತ್ರತಂಡ ಎರಡು ಪೋಸ್ಟರ್ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಉಳಿದ ಅಪ್ ಡೇಟ್ ಗಳನ್ನು ಚಿತ್ರತಂಡ ನೀಡಲಿದೆ.

ಇದನ್ನೂ ಓದಿ : ಬೂದಿ ಮುಚ್ಚಿದ ಕೆಂಡದಂತಿದ್ದ ಮದ್ದೂರು ಪಟ್ಟಣ ಸಹಜ ಸ್ಥಿತಿಯತ್ತ.. ಎಂದಿನಂತೆ ವ್ಯಾಪಾರ ವಹಿವಾಟು, ಜನ ಸಂಚಾರ ಆರಂಭ!

Btv Kannada
Author: Btv Kannada

Read More