ಮಂಡ್ಯ : ಮಂಡ್ಯದ ಮದ್ದೂರು ಪಟ್ಟಣದಲ್ಲಿ ನಿರ್ಮಾಣವಾಗಿದ್ದ ಪ್ರಕ್ಷಬ್ದ ವಾತಾವರಣ ಸದ್ಯ ಸಹಜ ಸ್ಥಿತಿಯತ್ತ ಮರಳಿದೆ. ಎಂದಿನಂತೆ ವ್ಯಾಪಾರ ವಹಿವಾಟು, ಜನ ಸಂಚಾರ ಆರಂಭವಾಗಿದೆ.
ಗಣೇಶ ವಿಸರ್ಜಾನ ಮೆರವಣಿಗೆ ವೇಳೆ ಕಲ್ಲು ತೂರಾಟ ಘಟನೆ ಕಳೆದ 3 ದಿನದಿಂದ ಮಂಡ್ಯದ ಮದ್ದೂರು ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಮದ್ದೂರು ಪಟ್ಟಣದಲ್ಲಿ ನಿನ್ನೆ ಬಿಜೆಪಿ-ಜೆಡಿಎಸ್ ನಾಯಕರು 27 ಗಣೇಶ ಮೂರ್ತಿಗಳ 3 ಕಿ.ಮೀ. ಮೆರವಣಿಗೆ ನಡೆಸಿ ಸಾಮೂಹಿಕ ಗಣೇಶ ವಿಸರ್ಜನೆ ಮಾಡಿದ್ದಾರೆ. ಹೀಗಾಗಿ ಇದೀಗ ಕೊಂಚ ಆತಂಕ ದೂರವಾಗಿದೆ.
ಇನ್ನೂ ಮದ್ದೂರು ಪಟ್ಟಣದಲ್ಲಿರುವ ಮಸೀದಿ, ದರ್ಗಾ ಬಳಿ ಪೊಲೀಸರ ಭದ್ರತೆ ಮುಂದುವರೆದಿದೆ. ಪಟ್ಟಣದಲ್ಲಿ ಹಲವು ಗಣಪತಿಗಳು ವಿಸರ್ಜನೆ ಇನ್ನೂ ಬಾಕ ಇರುವ ಹಿನ್ನೆಲೆ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲೇ ಬೀಡು ಬಿಟ್ಟಿದ್ದಾರೆ. ನಗರದ ಸೂಕ್ಷ್ಮ ಪ್ರದೇಶಗಳ ಮೇಲೆ ಕಟ್ಟೆಚ್ಚರ ವಹಿಸಿದ್ದಾರೆ.
ಮೇಲ್ನೋಟಕ್ಕೆ ಪಟ್ಟಣ ಸಹಜ ಸ್ಥಿತಿಯಲ್ಲಿದ್ರು, ಕೆಲ ಸ್ಥಳಗಳಲ್ಲಿ ಮದ್ದೂರು ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನೂ ಇಂದು ಮದ್ದೂರಿಗೆ ಹಿಂದೂ ಫೈರ್ ಬ್ರಾಂಡ್ ಶಾಸಕ ಯತ್ನಾಳ್ ಅವರು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಅಂಗ-ಅಂಗಾಂಶ ದಾನ ಮಾಡಿದ ಕಿಚ್ಚ ಸುದೀಪ್ ಪತ್ನಿ.. ಅಭಿಮಾನಿಗಳಿಗೂ ವಿಶೇಷ ಮನವಿ!







