75 ಸಾವಿರ ಲಂಚಕ್ಕೆ ಬೇಡಿಕೆ – ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದ ಕರ್ಮಷಿಯಲ್ ಟ್ಯಾಕ್ಸ್ ಅಧಿಕಾರಿ ರಾಮಾನುಜ!

ಬೆಂಗಳೂರು : ಲಂಚ ಪಡೆಯುತ್ತಿದ್ದಾಗಲೇ ಕರ್ಮಷಿಯಲ್ ಟ್ಯಾಕ್ಸ್ ಅಧಿಕಾರಿಯೊಬ್ಬ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಾಂತಿನಗರದಲ್ಲಿ ನಡೆದಿದೆ. ರಾಮಾನುಜ ಲೋಕಾ ಬಲೆಗೆ ಬಿದ್ದ ಕರ್ಮಶಿಯಲ್ ಟ್ಯಾಕ್ಸ್ ಅಧಿಕಾರಿ.

ಗುರುಪ್ರಸಾದ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾ ಅಧಿಕಾರಿಗಳು ಭ್ರಷ್ಟ ಕರ್ಮಶಿಯಲ್ ಟ್ಯಾಕ್ಸ್ ಅಧಿಕಾರಿ ರಾಮಾನುಜನನ್ನು ಟ್ರ್ಯಾಪ್ ಮಾಡಿದ್ದಾರೆ.

ಗುರುಪ್ರಸಾದ್ ಪರವಾಗಿ ಆರ್ಡರ್ ಮಾಡಲು ರಾಮಾನುಜ ಬರೋಬ್ಬರಿ 75 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ನಿನ್ನೆ ಮುಂಗಡವಾಗಿ 25 ಸಾವಿರ ಹಣ ಪಡೆಯುವಾಗ ರಾಮಾನುಜ ಲೋಕಾ ಬಲೆಗೆ ಬಿದ್ದಿದ್ದಾನೆ. ಸದ್ಯ ರಾಮಾನುಜಾನನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ನಟ ಪ್ರಥಮ್​ಗೆ ಬೆದರಿಕೆ ಹಾಕಿದ್ದ ಕೇಸ್ – ರೌಡಿಶೀಟರ್ ಬೇಕರಿ ರಘು ಸೇರಿ ಮತ್ತೋರ್ವ ಆರೋಪಿ ಅರೆಸ್ಟ್!

Btv Kannada
Author: Btv Kannada

Read More