ಆನ್‌ಲೈನ್ ಸಾಲ ಆ್ಯಪ್‌ನಿಂದ ವಂಚನೆ – ಮನನೊಂದು ಯುವಕ ಆತ್ಮಹತ್ಯೆ!

ಚಾಮರಾಜನಗರ : ಆನ್‌ಲೈನ್ ಸಾಲ ಆ್ಯಪ್‌ಗಳಿಂದ ವಂಚನೆಗೊಳಗಾದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕಾಮಗೆರೆ ಗ್ರಾಮದಲ್ಲಿ ನಡೆದಿದೆ. 30 ವರ್ಷದ ರಾಜಪ್ಪ ಮೃತ ಯುವಕ.

ರಾಜಪ್ಪ ಆನ್‌ಲೈನ್‌ನಲ್ಲಿ ರೂ 15 ಲಕ್ಷ ಸಾಲ ಪಡೆಯಲು ಯತ್ನಿಸಿ, ಹೆಚ್ಚುವರಿ ಹಣ ಸಿಗುತ್ತದೆ ಎಂಬ ಆಸೆಯಿಂದ ರೂ 2.5 ಲಕ್ಷವನ್ನು ಆನ್‌ಲೈನ್‌ ಪಾವತಿ ಮಾಡಿದ್ದರು. ಆದರೆ, ಸಾಲ ಸಿಗದೆ ವಂಚನೆಗೊಳಗಾದ ಕಾರಣ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ವಿಡಿಯೋ ಮಾಡಿ ತನಗಾದ ಮೋಸದ ಬಗ್ಗೆ ವಿವರಿಸಿದ್ದಾರೆ.

ರಾಜಪ್ಪ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರು, ಆದರೂ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್ ವೇನಲ್ಲಿ ಭೀಕರ ಅಪಘಾತ – ದಂಪತಿ ಸ್ಥಳದಲ್ಲೇ ಸಾವು!

Btv Kannada
Author: Btv Kannada

Read More