ವಂಚನೆ ಪ್ರಕರಣದಲ್ಲಿ ನಟ ಧ್ರುವ ಸರ್ಜಾ ವಿರುದ್ಧ ನ್ಯಾಯಾಲಯದ ಅನುಮತಿಯಿಲ್ಲದೆ ಆರೋಪಪಟ್ಟಿ ಸಲ್ಲಿಸದಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಮಧ್ಯಂತರ ಪರಿಹಾರ ನೀಡಿ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ. ಸಿನಿಮಾ ಮಾಡುವುದಾಗಿ 3 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ರಾಘವೇಂದ್ರ ಹೆಗ್ಗಡೆ ಎಂಬುವವರು ಧ್ರುವ ಸರ್ಜಾ ವಿರುದ್ಧ ದೂರು ನೀಡಿದ್ದರು.
ಇದೀಗ ಮುಂಬೈ ಹೈಕೋರ್ಟ್‌ನಿಂದ ಧ್ರುವಗೆ ಬಿಗ್ ರಿಲೀಫ್ ಸಿಕ್ಕಿದ್ದು, ಚಾರ್ಜ್‌ಶೀಟ್ ಸಲ್ಲಿಸದಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ ಕೂಡ ಮಾಡಿದೆ. ಮಾರ್ಟಿನ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರಾರಾಜಿಸಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೇಲೆ ಐರಾವತ ಡೈರೆಕ್ಟರ್ ರಾಘವೇಂದ್ರ ಹೆಗಡೆ 3 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ದರು.
ಈ ಬಗ್ಗೆ ಮುಂಬೈ ಪೊಲೀಸರು ಧ್ರುವ ಸರ್ಜಾ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ನೋಟಿಸ್ ಕೂಡ ನೀಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದು, ಮುಂದಿನ ವಿಚಾರಣೆವರೆಗೂ ಚಾರ್ಜ್‌ಶೀಟ್ ಸಲ್ಲಿಸದಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಇದನ್ನೂ ಓದಿ : ಮೈಸೂರ್ ಪಾಕ್ ಪ್ರಿಯರೇ ಹುಷಾರ್.. ಸಿಹಿ, ಖಾರಾ ತಿಂಡಿಗಳಲ್ಲೂ ಕೃತಕ ಬಣ್ಣ ಪತ್ತೆ – ಆಹಾರ ಇಲಾಖೆ ತನಿಖೆಯಲ್ಲಿ ಬಹಿರಂಗ!
Author: Btv Kannada
Post Views: 319







