ಬೆಂಗಳೂರು : ಮಹಿಳೆ ಹಾಗೂ ಬಿಎಂಟಿಸಿ ಚಾಲಕ ಹೊಡೆದಾಡಿಕೊಂಡಿರುವ ಘಟನೆ ಪೀಣ್ಯ NTTF ಸರ್ಕಲ್ನಲ್ಲಿ ಸೋಮವಾರ ಸಂಜೆ 6.30ಕ್ಕೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಎಂಟಿಸಿ ಬಸ್ನಲ್ಲಿಯೇ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಕಿರಿಕ್ ನಡೆದಿದ್ದು, ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿದ್ದಾರೆ. ಮೊದಲಿಗೆ ಚಾಲಕನ ಮೇಲೆ ಮಹಿಳೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ನಂತರ ಮಹಿಳೆ ಮೇಲೆ ಬಿಎಂಟಿಸಿ ಚಾಲಕನೂ ಕೈ ಮಿಲಾಯಿಸಿದ್ದಾನೆ. ಇನ್ನೂ ಮಾಹಿತಿಗಳ ಪ್ರಕಾರ ಈ ಘಟನೆ ಬಗ್ಗೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ : ‘ದಿಂಸೋಲ್’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್!
Author: Btv Kannada
Post Views: 380







