ಮೈಸೂರು : ಲೇಖಕಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕರೆ ನೀಡಿದ್ದ ‘ಚಾಮುಂಡಿ ಬೆಟ್ಟ ಚಲೋ’ ಮೆರವಣಿಗೆ ವೇಳೆ ನಿನ್ನೆ ದೊಡ್ಡ ಹೈಡ್ರಾಮಾ ನಡೆದಿದೆ. ಈ ಮಧ್ಯೆ ಸಜ್ಜನ ಮಹಿಳೆಯೊಬ್ಬರು ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ.

ಹೌದು.. ಮಹಿಳೆಯೊಬ್ಬರ ಮೇಲೆ ವಿನಾಕಾರಣ ಮೇಟಗಳ್ಳಿ ಸಬ್ ಇನ್ಸ್ಪೆಕ್ಟರ್ ಲತಾ ದೌರ್ಜನ್ಯ ಮಾಡಿದ್ದಾರೆ. ಎಸ್ಐ ಲತಾ ದೌರ್ಜನ್ಯಕ್ಕೆ ಮಹಿಳೆ ಬೀದಿಯಲ್ಲೇ ಕಣ್ಣೀರು ಹಾಕಿದ್ದಾರೆ. ನನ್ನ ಮಗಳಿಗೆ ಇಂಟರ್ವ್ಯೂ ಇದೆ, ಚಾಮುಂಡೇಶ್ವರಿ ತಾಯಿ ಬಳಿ ಬೇಡಲು ಹೋಗುತ್ತಿದ್ದೇನೆ, ದಯವಿಟ್ಟು ಬಿಡಿ ಎಂದರೂ ಕೇಳದ ಎಸ್ಐ ಲತಾ, ಅಮಾಯಕ ಮಹಿಳೆಯನ್ನು ರಸ್ತೆಯ ಮಧ್ಯದಲ್ಲೇ ಎಳೆದು ಹಾಕಿದ್ದಾರೆ.

ಅಮಾಯಕ ಮಹಿಳೆಯೂ ಅಳುತ್ತಾ ‘ಚಾಮುಂಡೇಶ್ವರಿ ತಾಯಿ ಬೇಡಲು ಹೋಗುತ್ತಿದ್ದೇನೆ. ನಮ್ಮನ್ನು ತಡೆದು ಎಳೆದು ಹಾಕುತ್ತಿದ್ದೀರಾ? ಇದು ನ್ಯಾಯವಲ್ಲ’ ಅಂತ ಪೊಲೀಸರ ನಡೆ ಖಂಡಿಸಿ ಸ್ಥಳದಲ್ಲೇ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನೊಂದೆಡೆ ಸಜ್ಜನ ಮಹಿಳೆಯ ಜೊತೆ ಕ್ರಿಮಿನಲ್ಗಳಂತೆ ನಡೆದುಕೊಂಡ ಎಸ್ಐ ಲತಾ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಮಹಿಳಾ ಭಕ್ತರ ಮೇಲೆ ದೌರ್ಜನ್ಯ ಮಾಡಿದ ದುರಹಂಕಾರಿ ಎಸ್ಐ ಲತಾ ವಿರುದ್ದ ಸಾರ್ವಜನಿಕರು ಸಿಡಿದೆದ್ದಿದ್ದು, ಚಾಮುಂಡಿ ಭಕ್ತೆ ಮಹಿಳೆಗೆ ನ್ಯಾಯ ಕೊಡಿ, ಎಸ್ಐ ಲತಾ ಸಸ್ಪೆಂಡ್ ಮಾಡಿ ಎಂದು ಗೃಹ ಸಚಿವರಿಗೆ ಜನ ಆಗ್ರಹಿಸಿದ್ದಾರೆ. ಸಜ್ಜನ ಭಕ್ತೆಯ ಮೇಲೆ ದೌರ್ಜನ್ಯ ನಡೆಸಿದ್ದ ಮೇಟಗಳ್ಳಿ ಸಬ್ ಇನ್ಸ್ಪೆಕ್ಟರ್ ಲತಾ ಮೇಲೆ ನೂರಾರು ದೂರುಗಳಿವೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಗೃಹ ಮಂತ್ರಿಗಳೇ ಚಾಮುಂಡಿ ತಾಯಿ ದರ್ಶನಕ್ಕೆ ಹೋಗ್ತಿದ್ದ ಮಹಿಳೆಯನ್ನ ಹೇಗೆ ಎಳದಾಡಿದ್ದಾರೆ ನೋಡಿ, ಕರ್ನಾಟಕದಲ್ಲಿ ದೇವರ ದರ್ಶನಕ್ಕೂ ಹೋಗಲು ಸ್ವಾತಂತ್ರ್ಯ ಇಲ್ವಾ? ಮಹಿಳಾ ಆಯೋಗದ ಅಧ್ಯಕ್ಷರೇ, ಎಸ್ಐ ಲತಾ ಮೇಲೆ ಎಫ್ಐಆರ್ಗೆ ಶಿಫಾರಸು ಮಾಡಿ, ಎಸ್ಐ ಲತಾರನ್ನು ಸಸ್ಪೆಂಡ್ ಅಲ್ಲ, ಕೂಡಲೇ ಅರೆಸ್ಟ್ ಮಾಡಬೇಕು ಎಂದು ರಾಜ್ಯಾದ್ಯಂತ ಜನ ಆಕ್ರೋಶ ಹೊರಹಾಕಿತ್ತಿದ್ದಾರೆ.
ಇದನ್ನೂ ಓದಿ : ಬಿಎಂಟಿಸಿ MD ರಾಮಚಂದ್ರನ್ ವಿರುದ್ದ ಸಾಲು ಸಾಲು ಗಂಭೀರ ಆರೋಪ – ಕಠಿಣ ಕ್ರಮಕ್ಕೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ದೂರು!







