ಬೆಂಗಳೂರು : ಲೇಬರ್ ಲೈಸೆನ್ಸ್ ನೀಡಲು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದಿದ್ದಾರೆ. ಲೇಬರ್ ಆಫೀಸರ್ ಶ್ಯಾಮ್ ರಾವ್ ಲೋಕಾ ಬಲೆಗೆ ಬಿದ್ದ ಭೂಪ.

ಶ್ಯಾಮ್ ರಾವ್ ಲೇಬರ್ ಕಚೇರಿ ವಿಭಾಗ 5ರ ಅಧಿಕಾರಿಯಾಗಿದ್ದು, ಈತ ವೆಂಕಟಾಚಲಪತಿ ಎಂಬವರ ಬಳಿ ಲೇಬರ್ ಲೈಸೆನ್ಸ್ಗೆ 10 ಸಾವಿರ ರೂ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ. ಇದೀಗ ಶ್ಯಾಮ್ ರಾವ್ ಜೊತೆ ಆತನ ಕಾರಿನ ಚಾಲಕ ದೇವರಾಜ್ ಕೂಡ ಲಾಕ್ ಆಗಿದ್ದಾನೆ.
ಲೋಕಾ DySP ಬಸವರಾಜ್ ಮುಗ್ಧಂ ನೇತೃತ್ವದಲ್ಲಿ ಶ್ಯಾಮ್ ರಾವ್ ಅನ್ನು ಟ್ರ್ಯಾಪ್ ಮಾಡಿದ್ದು, ಅಧಿಕಾರಿ ಶ್ಯಾಮ್ ರಾವ್ ವಿರುದ್ಧ 7(a) ಪ್ರವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಶ್ಯಾಮ್ ರಾವ್ನನ್ನು ಲೋಕಾ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಕೇಂದ್ರ ಸಚಿವರೆಂದು ಹೇಳಿ ಗವರ್ನರ್ಗೆ ನಕಲಿ ಕರೆ – ರಾಜ್ಯಪಾಲರನ್ನು ವಂಚಿಸಲು ಸೈಬರ್ ವಂಚಕರು ವಿಫಲ!
Author: Btv Kannada
Post Views: 1,032







