ಬೆಂಗಳೂರು : ಭಾರತದಲ್ಲಿ ಸೈಬರ್ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿದಿನ ಸೈಬರ್ ವಂಚನೆಗೆ ಸಂಬಂಧಿಸಿದ ಘಟನೆಗಳನ್ನು ಕೇಳುತ್ತಿರುತ್ತೇವೆ, ಇದೀಗ ರಾಜ್ಯಪಾಲರನ್ನು ಬಿಡದ ಸೈಬರ್ ವಂಚಕರು, ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನೂ ವಂಚಿಸಲು ಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಗಿದೆ.
ಗವರ್ನರ್ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಂತೆ ನಟಿಸಿ ವಂಚಕರು ಎರಡು ಬಾರಿ ಕರೆ ಮಾಡಿದ್ದರು. ದೂರವಾಣಿ ಕರೆ ಪರಿಶೀಲನೆ ನಂತರ ನಕಲಿ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿತ್ತು.
ಸದ್ಯ ರಾಜ್ಯಪಾಲರ ಕಚೇರಿಯಿಂದ ಸಿಸಿಬಿ ಸೆನ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಕರೆ ಬಂದಿದ್ದ ನಂಬರ್ ಪತ್ತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಭಾವಿ ಗಂಡನ ಜೊತೆ ಗಲಾಟೆ ಮಾಡ್ಕೊಂಡು ಆತ್ಮಹತ್ಯೆಗೆ ಯತ್ನ – ಪೊಲೀಸರ ಸಮಯ ಪ್ರಜ್ಞೆಯಿಂದ ಉಳೀತು ಯುವತಿ ಜೀವ!
Author: Btv Kannada
Post Views: 498







