ಬೆಂಗಳೂರು : ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಹೆಬ್ಬಗೋಡಿ ಭಾಗದಲ್ಲಿ ನಡೆದಿದೆ. ಪೊಲೀಸರ ಸಮಯಪ್ರಜ್ಞೆಯಿಂದ ಹೆಣ್ಮಗಳನ್ನ ಪ್ರಾಣ ಉಳಿದಿದೆ. BTV ಬಳಿಯಿದೆ ಪೊಲೀಸರ exclusive ರಕ್ಷಣಾ ಕಾರ್ಯಾಚರಣೆ.

ತಮಿಳುನಾಡಿನ ತಿರುವಳ್ಳೂರ್ ಮೂಲದ ದೀಪಿಕಾ ಹೆಬ್ಬಗೋಡಿ ಭಾಗದ ಬೃಂದಾವನ ಲೇಔಟ್ನ ಫ್ಲ್ಯಾಟ್ನಲ್ಲಿ ವಾಸವಾಗಿದ್ದಳು. ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಯುವತಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಹೀಗಿದ್ದ ದೀಪಿಕಾಗೆ ಕಳೆದ ಮೂರು ದಿನಗಳ ಹಿಂದೆ ಎಂಗೇಜ್ಮೆಂಟ್ ಆಗಿತ್ತು. ಆದ್ರೆ, ಎಂಗೇಜ್ಮೆಂಟಾದ ಯುವಕನ ಜೊತೆ ದೀಪಿಕಾ ನಿನ್ನೆ ಗಲಾಟೆ ಮಾಡಿಕೊಂಡಿದ್ದಳಂತೆ. ಇದೇ ಡಿಪ್ರೆಷನ್ನಲ್ಲಿ ಯುವತಿ 50 ಕ್ಕೂ ಹೆಚ್ಚು ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.
ಈ ವೇಳೆ ದೀಪಿಕಾ ಸ್ನೇಹಿತರೊಬ್ಬರಿಗೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಮೆಸೇಜ್ ಮಾಡಿದ್ದಳಂತೆ. ತಕ್ಷಣ ಸ್ನೇಹಿತರು 112 ಗೆ ಕರೆಮಾಡಿ ದೀಪಿಕಾ ಇದ್ದ ಫ್ಲ್ಯಾಟ್ನ ವಿಳಾಸವನ್ನ ತಿಳಿಸಿದ್ದಾರೆ. 112 ನ ಡೈರೆಕ್ಷನ್ ನಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಹೊಯ್ಸಳ ವಾಹನ ದೀಪಿಕಾಳಿದ್ದ ಸ್ಥಳಕ್ಕೆ ಎಂಟ್ರಿಕೊಟ್ಟಿದೆ. ಹೊಯ್ಸಳದಲ್ಲಿದ್ದ ASI ಸತೀಶ್ ಕುಮಾರ್ ಹಾಗೂ ಹೆಡ್ ಕಾನ್ಸ್ಟೇಬಲ್ ನಾಗೇಶ್ ಫ್ಲ್ಯಾಟ್ನೊಳಗೆ ಎಂಟ್ರಿಕೊಟ್ಟರು.
ನಂತರ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ದೀಪಿಕಾಳನ್ನ ಹೆಡ್ ಕಾನ್ಸ್ಟೇಬಲ್ ನಾಗೇಶ್ ಗಮನಿಸಿದ್ದು, ತಕ್ಷಣ ದೀಪಿಕಾ ಇದ್ದ ಫ್ಲ್ಯಾಟ್ನ ಬಾಗಿಲನ್ನ ಒಡೆದು ನಾಗೇಶ್ ಹಾಗೂ ಸತೀಶ್ ಒಳಹೊಕ್ತಾರೆ. ಈ ವೇಳೆ ಚಿಂತಾಜನಕ ಸ್ಥಿತಿಯಲ್ಲಿದ್ದ ದೀಪಿಕಾಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ಇದೀಗ ಒಂದು ಹೆಣ್ಮಗಳು ಜೀವಂತವಾಗಿದ್ದಾಳೆ.
ಇದನ್ನೂ ಓದಿ : ಮಹೇಶ್ ನಿರ್ದೇಶನದ ಚಿತ್ರಕ್ಕೆ ಚಿಕ್ಕಣ್ಣ ಹೀರೋ – ಅಕ್ಟೋಬರ್ನಲ್ಲಿ ಸಿನಿಮಾಗೆ ಮುಹೂರ್ತ!







