ಬೆಂಗಳೂರಲ್ಲಿ ಪ್ರೇಮ ವೈಫಲ್ಯದಿಂದ ಬೇಸತ್ತು ಯುವತಿ ಆತ್ಮಹತ್ಯೆ!

ಬೆಂಗಳೂರು : ಪ್ರೇಮ ವೈಫಲ್ಯ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಾಜಿನಗರದ ಗಾಯಿತ್ರಿ ನಗರದಲ್ಲಿ ನಡೆದಿದೆ. ಲತಾ(25) ನೇಣಿಗೆ ಶರಣಾದ ಯುವತಿ.

ಯುವತಿ ಇಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಂಜಿತ್ ಮತ್ತು ಲತಾ ಕಳೆದ 5 ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಇಬ್ಬರೂ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ರಂಜಿತ್ ಎಲೆಕ್ಟ್ರೀಷನ್ ಆಗಿ ಕೆಲಸ ಮಾಡುತ್ತಿದ್ದು, ಲತಾ ಖಾಸಗಿ ಕ್ಲಿನಿಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಎರಡು ಕುಟುಂಬದವರು ಇವರಿಬ್ಬರ ಮದುವೆಗೂ ಒಪ್ಪಿಗೆ ಸೂಚಿಸಿದ್ದರು. ಆದರೆ ರಂಜಿತ್ ಮದುವೆ ವಿಚಾರವನ್ನು ಪದೇ ಪದೇ ಮುಂದೂಡುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ಆಗ್ತಿತ್ತು.

ನಿನ್ನೆ ಕೂಡ ಇದೇ ವಿಚಾರಕ್ಕೆ ರಂಜಿತ್ – ಲತಾ ನಡುವೆ ಗಲಾಟೆ ನಡೆದಿದ್ದು, ಇಂದು ಯುವತಿ ತನ್ನ ಮನೆಯ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಸುಬ್ರಮಣ್ಯ ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ : ಮದ್ದೂರು ಕಲ್ಲು ತೂರಾಟ ಖಂಡಿಸಿ ಕೆರಗೋಡು ಗ್ರಾಮದಲ್ಲಿ ಬೃಹತ್ ಪ್ರೊಟೆಸ್ಟ್ – ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ!

Btv Kannada
Author: Btv Kannada

Read More