ಮದ್ದೂರು ಕಲ್ಲು ತೂರಾಟ ಖಂಡಿಸಿ ಕೆರಗೋಡು ಗ್ರಾಮದಲ್ಲಿ ಬೃಹತ್ ಪ್ರೊಟೆಸ್ಟ್ – ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ!

ಮಂಡ್ಯ : ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಘಟನೆ ಖಂಡಿಸಿ ನಿನ್ನೆ ಮದ್ದೂರಲ್ಲಿ ಹಿಂದೂಪರ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದರು. ಇಂದೂ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಇಂದು ಮದ್ದೂರು ಬಂದ್ ಬಂದ್​ಗೆ ಕರೆ ಕೊಟ್ಟಿದೆ. ಇದೀಗ ಈ ದುರ್ಘಟನೆ ಖಂಡಿಸಿ ಹನುಮಧ್ವಜ ಸಮಿತಿ ಕೆರಗೋಡು ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಲ್ಲು ತೂರಾಟ ಖಂಡಿಸಿ ಹನುಮಧ್ವಜ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಿದ್ದು, ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಕಿಡಿಕೇಡಿಗಳನ್ನ ಬಂಧಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಹನುಮ ಧ್ವಜ ಸಮಿತಿ ಸದಸ್ಯ ವಿನೋಭಾ ಸೇರಿ ಹಲವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ : ಮದ್ದೂರು ಕಲ್ಲು ತೂರಾಟ ಕೇಸ್ – ಸತ್ಯಾಸತ್ಯತೆ ಅರಿಯಲು ಸತ್ಯಶೋಧನಾ ತಂಡ ರಚಿಸಿದ ರಾಜ್ಯ ಬಿಜೆಪಿ!

Btv Kannada
Author: Btv Kannada

Read More