ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿ ಇತರ ಆರೋಪಿಗಳಿಗೆ ದಿನದಿಂದ ದಿನಕ್ಕೆ ಟೆನ್ಷನ್ ಹೆಚ್ಚುತ್ತಲೇ ಇದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣ ಸಂಬಂಧ ಇಂದು ಕೋರ್ಟ್ನಲ್ಲಿ ಚಾರ್ಜ್ ಫ್ರೇಮ್ ಹಿನ್ನೆಲೆ ದರ್ಶನ್ ಸೇರಿ ಜೈಲಿನಲ್ಲಿರುವ ಎಲ್ಲಾ ಆರೋಪಿಗಳು ಕೋರ್ಟ್ ಹಾಜರಾಗುವ ಸಾಧ್ಯತೆಯಿದೆ.
ಜೈಲಿನಲ್ಲಿರುವ ನಟ ದರ್ಶನ್, ಪವಿತ್ರಾಗೌಡ ಸೇರಿ ಏಳು ಮಂದಿ ಇಂದು ಕೋರ್ಟ್ಗೆ ಹಾಜರಾಗಲಿದ್ದು, ಇದರಿಂದ ನಟ ದರ್ಶನ್ ಆಂಡ್ ಗ್ಯಾಂಗ್ಗೆ ಅಗ್ನಿಪರೀಕ್ಷೆ ಶುರುವಾದಂತಾಗಿದೆ. ಚಾರ್ಜ್ ಪ್ರೇಮ್ ಸಲುವಾಗಿ ನ್ಯಾಯಾಲಯ ಎರಡು ಕಡೆ ವಾದ ಆಲಿಸಲಿದ್ದು, ಇದಾದ ಬಳಿಕ ರೇಣುಕಾಸ್ವಾಮಿ ಕೊಲೆ ಸಂಬಂಧ ಟ್ರಯಲ್ ಆರಂಭಿಸಲು ದಿನಾಂಕ ನಿಗದಿ ಪಡಿಸಲಿದೆ.
ಇದನ್ನೂ ಓದಿ : ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ನಟ ದರ್ಶನ್? ದಾಸನಿಗೆ ದಿಂಬು, ಹಾಸಿಗೆ ಸಿಗುತ್ತಾ? – ಇಂದು ತೀರ್ಪು ಪ್ರಕಟ!
Author: Btv Kannada
Post Views: 314







