ಭಾರತದಲ್ಲಿ ಆಪಲ್ ಕಂಪನಿ ಈಗಾಗಲೇ ಐಫೋನ್‌ನ ಹಲವು ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಕಂಪನಿಯು ನಾಳೆ ತನ್ನ ಬಹುನಿರೀಕ್ಷಿತ iPhone 17 ಸರಣಿಯನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ.
ಈ ಬಾರಿ iPhone 17, iPhone 17 Air, iPhone 17 Pro, ಮತ್ತು iPhone 17 Pro Max ಎಂಬ ನಾಲ್ಕು ಹೊಸ ಐಫೋನ್‌ಗಳನ್ನು ಅನಾವರಣ ಮಾಡಲಾಗುತ್ತದೆ. ಹಳೆಯ Plus ಮಾದರಿಯ ಬದಲಿಗೆ, ಈ ಬಾರಿ ತೂಕದಲ್ಲಿ ಹಗುರವಾದ ಹಾಗೂ ಸ್ಲಿಮ್ ಆಗಿರುವ ಹೊಸ iPhone 17 Air ಅನ್ನು ಪರಿಚಯಿಸಲಾಗುತ್ತಿದೆ.

ನಾಳೆ ನಡೆಯಲಿರುವ ‘ಓವ್ ಡ್ರಾಪಿಂಗ್’ ಬಿಡುಗಡೆ ಕಾರ್ಯಕ್ರಮದಲ್ಲಿ ಐಫೋನ್ 17 ಸರಣಿಯನ್ನು ಆಪಲ್ ಪ್ರಸ್ತುತಪಡಿಸಲಿದೆ. ಕಳೆದ ಕೆಲವು ವರ್ಷಗಳಿಂದ ಆಪಲ್ ಉತ್ಪನ್ನಗಳಲ್ಲಿ ಹೆಚ್ಚಿನ ಹೊಸತನ ಕಂಡುಬಂದಿಲ್ಲ. ಈ ಬಾರಿಯೂ ಸಹ, ಆಪಲ್ ಈ ಸರಣಿಯನ್ನು ಸಣ್ಣ ಬದಲಾವಣೆಗಳೊಂದಿಗೆ ಪ್ರಸ್ತುತಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.
iPhone 17 ಹೊಸ ಸರಣಿಯ ಪ್ರಮುಖ ವೈಶಿಷ್ಟ್ಯಗಳು :
ಸ್ಲಿಮ್ ಫೋನ್ : ಐಫೋನ್ 17 ಏರ್ ಅನ್ನು ಬಿಡುಗಡೆ ಮಾಡಬಹುದು. ಇದು ಆಪಲ್‌ನ ಅತ್ಯಂತ ತೆಳುವಾದ ಫೋನ್ ಆಗಿರಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ. ಇದನ್ನು ಬಿಡುಗಡೆ ಮಾಡಿದರೆ, ಐಫೋನ್ X ನಂತರ ಇದು ಅತಿದೊಡ್ಡ ವಿನ್ಯಾಸ ಬದಲಾವಣೆಯಾಗಲಿದೆ.
ಸೆಲ್ಫಿ ಕ್ಯಾಮೆರಾ : ಈ ಬಾರಿ ಎಲ್ಲಾ ಮಾದರಿಗಳು 24MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತವೆ. ಮೊದಲು 12MP ಮುಂಭಾಗದ ಕ್ಯಾಮೆರಾ ಲಭ್ಯವಿತ್ತು. ಪ್ರೊ ಮಾದರಿಗಳಲ್ಲಿ ಮೊದಲ ಬಾರಿಗೆ 8K ವಿಡಿಯೋ ರೆಕಾರ್ಡಿಂಗ್ ನೀಡಬಹುದು.
ಪವರ್ ಬ್ಯಾಕಪ್ : ಐಫೋನ್ 17 ಮತ್ತು ಪ್ರೊ ಮ್ಯಾಕ್ಸ್ 5000mAh ಗಿಂತ ಹೆಚ್ಚಿನ ಬ್ಯಾಟರಿಯನ್ನು ಹೊಂದಬಹುದು. ಇದರೊಂದಿಗೆ, 35W ವೈರ್ಡ್ ಮತ್ತು 25W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ನೀಡಬಹುದು.
AI ವೈಶಿಷ್ಟ್ಯಗಳು : ಐಫೋನ್ 17 ಆಪಲ್ ಇಂಟೆಲಿಜೆನ್ಸ್‌ನೊಂದಿಗೆ ನವೀಕರಿಸಿದ ಸಿರಿ, AI- ಆಧಾರಿತ ಫೋಟೋ/ವಿಡಿಯೋ ಕ್ರಿಯೇಟ್, ಸ್ವಯಂಚಾಲಿತ ಪಠ್ಯ ಸಾರಾಂಶ ಮತ್ತು ಝೆನ್‌ಮೋಜಿಯಂತಹ ವೈಶಿಷ್ಟ್ಯಗಳನ್ನು ಪಡೆಯಬಹುದು.
ಬೆಲೆ : ಭಾರತದಲ್ಲಿ ಸ್ಟ್ಯಾಂಡರ್ಡ್ ಐಫೋನ್ 17 ಬೆಲೆ 79,900 ರೂಪಾಯಿಗಳಿಂದ ಪ್ರಾರಂಭವಾಗಬಹುದು, ಇದು ಅದರ ಉನ್ನತ ಮಾದರಿ ಪ್ರೊ ಮ್ಯಾಕ್ಸ್‌ಗೆ 1,64,900 ರೂಪಾಯಿವರೆಗೆ ಇರಬಹುದು.
ಇದನ್ನೂ ಓದಿ : ಸಿನಿಮಾ ನಿರ್ಮಾಣಕ್ಕಿಳಿದ ನಟ ಪ್ರಜ್ವಲ್ ದೇವರಾಜ್!







