DCC ಬ್ಯಾಂಕ್ ಚುನಾವಣೆ – ತಾರಕಕ್ಕೇರಿದ ಅಧಿಕಾರ ಬಡಿದಾಟ.. ಜಾರಕಿಹೊಳಿ ಬೆಂಬಲಿಸುವ ಗಂಡನನ್ನೇ ತರಾಟೆಗೆ ತೆಗೆದುಕೊಂಡ ಪತ್ನಿ!

ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆ ಹುಕ್ಕೇರಿ ತಾಲೂಕಿನಲ್ಲಿ ಅಧಿಕಾರದ ಬಡಿದಾಟ ತಾರಕಕ್ಕೇರಿದೆ. ಸಚಿವ ಸತೀಶ ಜಾರಕಿಹೊಳಿಗೆ ಬೆಂಬಲಿಸುವ ಗಂಡನನ್ನು ಹೆಂಡತಿ ನಡು ರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೆಂಡತಿ ರಮೇಶ ಕತ್ತಿ ಪರ ಆಗಿದ್ದಾರೆ. ಹಾಗಾಗಿ ಸಚಿವ ಸತೀಶ ಜಾರಕಿಹೊಳಿ ಮುಂದೆನೇ ಗಂಡನ ಕೊರಳಪಟ್ಟಿ ಹಿಡಿದು ಪತ್ನಿ ಎಳೆದಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮದಿಹಳ್ಳಿ ಪಿಕೆಪಿಎಸ್ ಸದಸ್ಯ ಮಾರುತಿ ಸನದಿ ಜಾರಕಿಹೊಳಿ ಬೆಂಬಲಿಗರ ಜೊತೆ ರೆಸಾರ್ಟ್​ಗೆ ತೆರಳಿದ್ದ. ಸತೀಶ ಜಾರಕಿಹೊಳಿ ಆಗಮಿಸಿದ ವೇಳೆ ಪತ್ನಿ ಗಂಡನನ್ನು ಎಳೆದಾಡಿದ್ದಾಳೆ. ಈ ವೇಳೆ ಜಾರಕಿಹೊಳಿ ಗಂಡ-ಹೆಂಡತಿ ಕಾಳಗ ಬಿಡಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ : ತನ್ನ ಲವ್ವರ್ ಜೊತೆ ಫೋನ​​ಲ್ಲಿ ಮಾತಾಡಿದ್ದಕ್ಕೆ ಸ್ನೇಹಿತನನ್ನೇ ಕೊಲೆಗೈದ ಯುವಕ!

Btv Kannada
Author: Btv Kannada

Read More