ಬೆಂಗಳೂರು : ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸುತ್ತಿದ್ದ ಉಗ್ರನನ್ನ ಬಂಧಿಸುವಲ್ಲಿ NIA ಆಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹೊಸಕೋಟೆ ಸಮೀಪದ ಆವಲಹಳ್ಳಿಯ ಬಳಿಯ ಕೆ.ಆರ್ ಡಿಫೆನ್ಸ್ ಕಾಲೋನಿಯ ಶೆಡ್ ಒಂದರಲ್ಲಿ ವಾಸವಿದ್ದ ಮುರ ಸಲೀಂ ಬಂಧಿತ ಉಗ್ರ.

ಈ ಹಿಂದೆ ಮರ ಸಲೀಂ ಕಾಶ್ಮೀರದ ಆವಂತಿಪುರದಲ್ಲಿ ಉಗ್ರ ಚಟುವಟಿಕೆಯನ್ನ ನಡೆಸಿದ್ದ. ನಂತರ ಬಿಹಾರಕ್ಕೆ ಬಂದವ್ನೇ ಅಲ್ಲಿ ನಕಲಿ ಆಧಾರ್ ಕಾರ್ಡನ್ನ ಮಾಡಿಸಿಕೊಂಡು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಕೇಂದ್ರ ಗುಪ್ತಚರ ಇಲಾಖೆ ಹಾಗೂ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜನ್ಸಿ ತನ್ನನ್ನ ಹುಡುಕಾಟ ನಡೆಸ್ತಿದೆ ಎಂಬುದನ್ನ ಅರಿತ ಮುರ ಸಲೀಂ ಅಲ್ಲಿಂದ ಬೆಂಗಳೂರಿಗೆ ಪರಾರಿಯಾಗಿದ್ದ.
ಕಳೆದ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಸಲೀಂ ಆವಲಹಳ್ಳಿಯ ಕೆ.ಆರ್ ಡಿಫೆನ್ಸ್ ಕಾಲೋನಿಯ ಶೆಡ್ ಒಂದರಲ್ಲಿ ಜೀವನ ಸಾಗಿಸೋಕೆ ಶುರುಮಾಡಿದ್ದ. ಈ ಬಗ್ಗೆ ಮಾಹಿತಿ ಪಡೆದ NIA ಅಧಿಕಾರಿಗಳು ಇದೀಗ ಉಗ್ರ ಮುರ ಸಲೀಂನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ಉಗ್ರ ಮುರ ಸಲೀಂ 19 ವರ್ಷದವನಾಗಿದ್ದು ಕಳೆದ ಮೂರು ವರ್ಷದಿಂದ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯಲ್ಲಿ ಭಾಗಿಯಾಗಿ ವಿಧ್ವಂಸಕ ಕೃತ್ಯವನ್ನ ಎಸಗಿದ್ದನಂತೆ.
ಅಷ್ಟೇ ಅಲ್ಲ ಕಚ್ಚಾ ಸಾಮಾಗ್ರಿಗಳನ್ನ ಬಳಸಿ ಬಾಂಬ್ ಗಳನ್ನ ತಯಾರಿಸುವ ಕೆಲಸವನ್ನ ಇದೇ ಮುರ ಸಲೀಂ ಮಾಡ್ತಿದ್ದ. ಅದಕ್ಕಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಭಾಗದಲ್ಲೂ ಬಾಂಬ್ ತಯಾರಿಸುವ ಟ್ರೈನಿಂಗ್ ಪಡೆದಿದ್ದ ಎನ್ನಲಾಗ್ತಿದೆ. ಅದೇ ರೀತಿ ಬೆಂಗಳೂರಿನಲ್ಲೂ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಸದ್ಯ,NIA ಅಧಿಕಾರಿಗಳು ಪ್ರಕರಣ ಸಂಬಂಧ ಮುರ ಸಲೀಂನನ್ನ ಬಂಧಿಸಿ ಹೆಚ್ಚಿನ ವಿಚಾರಣೆಯನ್ನ ಕೈಗೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ : ಮೀಸೆ ಚಿಗುರದ ಉಗ್ರ ಬೆಂಗಳೂರಲ್ಲಿ ಲಾಕ್.. ಸಿಲಿಕಾನ್ ಸಿಟಿಯನ್ನೇ ಸ್ಫೋಟಿಸೋಕೆ ಸ್ಕೆಚ್ ಹಾಕಿದ್ನಾ ಉಗ್ರ?







