ಬಾಗಲಕೋಟೆ : ತಮ್ಮ ಕುಟುಂಬದ ಎರಡನೇ ಮಗನನ್ನೇ ಹೆತ್ತವರು ಡಿಸೇಲ್ ಸುರಿದು ಬೆಂಕಿ ಹೆಚ್ಚಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನ ಕಾನಟ್ಟಿ ಕುಟುಂಬದ ಅನೀಲ ಪರಪ್ಪ ಕಾನಟ್ಟಿ (32) ಎಂದು ಗುರುತಿಸಲಾಗಿದೆ.

ಕೊಲೆಯಾದ ವ್ಯಕ್ತಿ ಸಾರಾಯಿ ಚಟಕ್ಕೆ ಅಂಟಿಕೊಂಡಿದ್ದು, ಮೇಲಿಂದ ಮೇಲೆ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆಯುತ್ತಿದ್ದನಂತೆ. ಕಳೆದ ಸೆಪ್ಟೆಂಬರ್ 5ರ ರಾತ್ರಿ ಹೊತ್ತು ಕೂಡ ಸಾರಾಯಿ ಕುಡಿದ ಅಮಲಿನಲ್ಲಿ ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆದಿದ್ದಾನೆ. ಈ ವೇಳೆ ರೊಚ್ವಿಗೆದ್ದ ಕುಟುಂಬಸ್ಥರು ಹಗ್ಗದಿಂದ ಕುತ್ತಿಗೆ, ಕೈ-ಕಾಲು ಕಟ್ಟಿ , ಡಿಸೇಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.

ಮೃತನ ಅಣ್ಣ ಬಸವರಾಜ್ ಕಾನಟ್ಟಿ ,ಮೃತನ ತಂದೆ ಪರಪ್ಪ ಕಾನಟ್ಟಿ ಮೃತನ ತಾಯಿ ಶಾಂತಾ ಕಾನಟ್ಟಿ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಸಾವಳಗಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು, ಮೂವರೂ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ನಭೋ ಮಂಡಲದಲ್ಲಿ ರಕ್ತ ಚಂದ್ರಗ್ರಹಣ ಗೋಚರ.. ವಿಸ್ಮಯ ಕಣ್ತುಂಬಿಕೊಂಡ ಜನ!







