17 ವಜ್ರದುಂಗುರ, 24ಕೆಜಿಗೂ ಅಧಿಕ ಚಿನ್ನ.. ವೀರೇಂದ್ರ ಪಪ್ಪಿ ಬ್ಯಾಂಕ್​ ಲಾಕರ್​ನಲ್ಲಿದ್ದ ಅಕ್ರಮ ಆಸ್ತಿ ಕಂಡು ದಂಗಾದ ED ಅಧಿಕಾರಿಗಳು!

ಚಿತ್ರದುರ್ಗ : ಆನ್‌ಲೈನ್ ಬೆಟ್ಟಿಂಗ್ ಹಾಗೂ ಮನಿ ಗೇಮಿಂಗ್ ಹಗರಣದಲ್ಲಿ ಬಂಧನದಲ್ಲಿರುವ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ED ಮತ್ತೆ ಶಾಕ್‌ ನೀಡಿದೆ. ಶಾಸಕರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ 3ನೇ ಸಲ ದಾಳಿ ಮಾಡಿದೆ.

ಚಳ್ಳಕೆರೆ ನಗರದ ಬ್ಯಾಂಕ್ ಗಳಿಗೆ ಇಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಪ್ಪಿ ಬ್ಯಾಂಕ್ ಲಾಕರ್​​ ತೆರೆದು ನೋಡಿದ ಅಧಿಕಾರಿಗಳೇ ಫುಲ್ ಶಾಕ್ ಆಗಿದ್ದಾರೆ. ಎಐಎಸ್​ಎಕ್ಸ್​ ಬ್ಯಾಂಕ್​ನ ಲಾಕರ್​​ಗಳಲ್ಲಿ ವೀರೇಂದ್ರ ಪಪ್ಪಿಗೆ ಸೇರಿದ ಬರೋಬ್ಬರಿ 24.5 ಕೆ.ಜಿ ಗೋಲ್ಡ್ ಬಿಸ್ಕೆಟ್, 17 ವಜ್ರದ ಉಂಗುರಗಳು ಪತ್ತೆ ಆಗಿವೆ. ಇವುಗಳ ಜೊತೆಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಅಕ್ರಮ ಆಸ್ತಿ ಪತ್ರಗಳನ್ನು ಪರಿಶೀಲನೆ ಮಾಡುವಾಗ ED ಅಧಿಕಾರಿಗಳು ಅಕ್ಷರಶಃ ದಂಗಾಗಿ ಹೋಗಿದ್ದಾರೆ.

ಈ ಬ್ಯಾಂಕ್ ಅಲ್ಲದೇ ಕೋಟಕ್ ಮಹೀಂದ್ರಾ ಬ್ಯಾಂಕ್​​ನಲ್ಲಿ ಸುಮಾರು 5 ಕೆ.ಜಿ ಗೋಲ್ಡ್ ಬಿಸ್ಕೆಟ್ ಅಧಿಕಾರಿಗಳಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಎಸ್​​ಬಿಐ ಬ್ಯಾಂಕ್​ನಲ್ಲೂ ದುಪಟ್ಟು ಗಟ್ಟಿ ಬಂಗಾರದ ಬಿಸ್ಕೆಟ್, ಆಸ್ತಿ ಪತ್ರಗಳು ಸಿಕ್ಕಿವೆ ಎನ್ನಲಾಗಿದೆ. ಸದ್ಯ ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ಶಾಸಕ ಪಪ್ಪಿಗೆ ಇಡಿ ಡ್ರಿಲ್ ಮಾಡುತ್ತಿದ್ದು, ಇದೀಗ ಕಾಂಗ್ರೆಸ್​ ಶಾಸಕನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ : ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಗುಂಪುಗಳ ಮಧ್ಯೆ ಘರ್ಷಣೆ, ಕಲ್ಲು ತೂರಾಟ – 8 ಮಂದಿಗೆ ಗಾಯ.. ಸ್ಥಳದಲ್ಲಿ ಬಿಗುವಿನ ವಾತಾವರಣ!

Btv Kannada
Author: Btv Kannada

Read More