ಬೆಂಗಳೂರು : ಹಣ ಕೊಟ್ಟು ಸಹಾಯ ಮಾಡಿದ ತಪ್ಪಿಗೆ ಯುವತಿಗೆ ಕಿರಾತಕನೋರ್ವ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಯುವತಿಯಿಂದ 3 ಲಕ್ಷ 71 ಸಾವಿರ ಹಣ ಲೋನ್ ಮಾಡಿಸಿ ಪಾಪಿ ಬ್ಲ್ಯಾಕ್ ಮೇಲೆ ಮಾಡ್ತಿದ್ದಾನೆ. ತನ್ನ ಜೊತೆ ದೈಹಿಕ ಸಂಬಂಧ ಬೆಳೆಸುವವರೆಗೂ EMI ಕಟ್ಟಲ್ಲ, ಹಣ ವಾಪಸ್ ಕೇಳಿದ್ರೆ ರೇಪ್ ಮಾಡ್ತಿನಿ ಎಂದು ಪಾಪಿ ಬೆದರಿಕೆ ಹಾಕಿದ್ದಾನೆ.

ಯುವತಿ ಮನೆ ಪಕ್ಕದ ಚಾರ್ಲ್ಸ್ ರಿಚರ್ಡ್ ಎಂಬಾತನಿಗೆ EMI ಮೂಲಕ ಹಣ ಸಹಾಯ ಮಾಡಿದ್ದಳು. ಇದೀಗ ಸಹಾಯ ಮಾಡಿದ್ದ ಯುವತಿಯ ಹಣವೂ ಹೋಯ್ತು, ಮರ್ಯಾದೆಯೂ ಹೋಯ್ತು. ಬ್ಲಾಕ್ ಮೇಲರ್, ಯುವತಿಯಿಂದ 3 ಲಕ್ಷ 71 ಸಾವಿರ ಹಣ ಲೋನ್ ಮಾಡಿಸಿದ್ದ. ನಂತರ ಆ ಹಣದಲ್ಲಿ 2 ಲಕ್ಷ 71 ಸಾವಿರ ಹಣ ಪಡೆದುಕೊಂಡಿದ್ದ. ಪ್ರತಿ ತಿಂಗಳು EMI ನಾನೇ ಕಟ್ತಿನಿ ಎಂದು ನಂಬಿಸಿದ್ದ. ಆದರೆ ಒಂದೆರಡು ತಿಂಗಳು EMI ಕಟ್ಟಿ ಕಿರಾತಕ ತನ್ನ ಅಸಲಿ ಆಟ ಶುರು ಮಾಡಿದ್ದ.

ಸಾಮಾಜಿಕ ಜಾಲತಾಣದಲ್ಲಿ ಮಾರ್ಫ್ ಮಾಡಿದ ಫೊಟೋ ಹಾಕೋದಾಗಿ ಬೆದರಿಕೆ ಹಾಕಿದ್ದು, ತನ್ನ ಜೊತೆ ಮಲಗಬೇಕು ಇಲ್ಲ ಹಣ ನೀಡೋದಿಲ್ಲ. ಹಣ ಕೇಳಿದ್ರೆ ಗೂಂಡಾಗಳ ಜೊತೆ ರೇಪ್ ಮಾಡ್ತೀನಿ ಎಂದು ಯುವತಿಗೆ ಬ್ಲ್ಯಾಕ್ ಮೇಲೆ ಮಾಡಿದ್ದಾನೆ. ಆತನ ಕಿರುಕುಳ ತಾಳಲಾರದೆ ಇದೀಗ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಚಾರ್ಲ್ಸ್ ರಿಚರ್ಡ್ ಹಾಗೂ ಆ್ಯಂಡ್ರೂ ಅಗಾಸಿ ಎಂಬ ಇಬ್ಬರ ಮೇಲೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಕಲಬುರಗಿ : ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ!







