‘ಕಾಂತಾರ ಚಾಪ್ಟರ್‌ 1’ ಅಖಾಡಕ್ಕೆ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಎಂಟ್ರಿ.. ಮಲಯಾಳಂ ರೈಟ್ಸ್‌ ಖರೀದಿ!

ಮಲಯಾಳಂ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್ ಕನ್ನಡದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್‌ ಜತೆ ಒಡನಾಟದಲ್ಲಿದ್ದಾರೆ. ಪೃಥ್ವಿರಾಜ್‌ ತಮ್ಮ ನಿರ್ಮಾಣ ಸಂಸ್ಥೆ ಪೃಥ್ವಿರಾಜ್‌ ಪ್ರೊಡಕ್ಷನ್ಸ್‌ ಮೂಲಕ ಹಲವು ಕನ್ನಡ ಚಿತ್ರಗಳ ಮಲಯಾಳಂ ಅವತರಣಿಕೆಯನ್ನು ಕೇರಳದಲ್ಲಿ ಬಿಡುಗಡೆಗೊಳಿಸಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯೂ ಈಗಾಗಲೇ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಕೆಜಿಎಫ್‌: ಚಾಪ್ಟರ್‌ ʼ2, ʼಕಾಂತಾರʼ, ತೆಲುಗು ಚಿತ್ರ ʼಸಲಾರ್‌: ಪಾರ್ಟ್‌ 1 ಸೀಸ್‌ಫೈರ್‌ʼನ ಮಲಯಾಳಂ ಡಬ್‌ನ ಹಕ್ಕು ಪಡೆದುಕೊಂಡಿದ್ದಾರೆ. ಇದೀಗ ಮತ್ತೊಂದು ಬಹುನಿರೀಕ್ಷಿತ ಚಿತ್ರ, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕನ್ನಡದ ʼಕಾಂತಾರ: ಚಾಪ್ಟರ್‌ 1ʼರ ಮಲಯಾಳಂ ಆವೃತ್ತಿಯನ್ನು ಕೇರಳದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದಾರೆ.

ಬಹುನಿರೀಕ್ಷಿತ ಸಾಂಸ್ಕೃತಿಕ ಬ್ಲಾಕ್‌ಬಸ್ಟರ್ ‘ಕಾಂತಾರ’ದ ಪ್ರೀಕ್ವೆಲ್ ‘ಕಾಂತಾರ ಚಾಪ್ಟರ್ 1’ ಕೇರಳದಾದ್ಯಂತ ಅಕ್ಟೋಬರ್ 2, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪೃಥ್ವಿರಾಜ್ ಮತ್ತು ಸುಪ್ರಿಯಾ ಮೆನನ್ ಅವರು ಪೃಥ್ವಿರಾಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಲನಚಿತ್ರವನ್ನು ಕೇರಳದಲ್ಲಿ ಬಿಡುಗಡೆ ಮಾಡಲಿದ್ದಾರೆ. ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಈ ಚಿತ್ರವನ್ನು ಮಲಯಾಳಂ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ‘ಕಾಂತಾರ ಚಾಪ್ಟರ್ 1’ ನೊಂದಿಗೆ, ಪ್ರೇಕ್ಷಕರು ದೈವತ್ವ, ಸಂಸ್ಕೃತಿ ಮತ್ತು ವೈಭವದಲ್ಲಿ ಬೇರೂರಿರುವ ತಲ್ಲೀನಗೊಳಿಸುವ ಸಿನಿಮಾ ಅನುಭವವನ್ನು ನಿರೀಕ್ಷಿಸಬಹುದು.

ಈ ಬಗ್ಗೆ ಪೃಥ್ವಿರಾಜ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ʼʼದೈವಿಕ ಪ್ರದರ್ಶನಕ್ಕೆ ಮತ್ತೊಮ್ಮೆ ಹೊಂಬಾಳೆ ಫಿಲ್ಮ್ಸ್‌ ಜತೆ ಕೈ ಜೋಡಿಸಲು ಮುಂದಾಗಿದ್ದೇವೆ. ʼಕಾಂತಾರ: ಚಾಪ್ಟರ್‌ 1ʼ ಸಿನಿಮಾದ ಮಲಯಾಳಂ ಅವತರಣಿಕೆಯನ್ನು ಅಕ್ಟೋಬರ್‌ 2ರಂದು ಕೇರಳ ಥಿಯೇಟರ್‌ಗಳಲ್ಲಿ ನೋಡಿʼʼ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಸುದ್ದಿ ತಿಳಿಸು ಫ್ಯಾನ್‌ ಖುಷಿಯಾಗಿದ್ದಾರೆ.

ಇದನ್ನೂ ಓದಿ : “ದೈವ” ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ಖ್ಯಾತ ನಿರ್ದೇಶಕ ಗುರು ದೇಶಪಾಂಡೆ!

Btv Kannada
Author: Btv Kannada

Read More